1 Kings 14:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನೆಲ್ಲ ಯೆಹೂದದ ಜನರು ಮಾಡಿ ಪಾಪಿಗಳಾದರು. ಯೆಹೋವನು ಅವರ ಮೇಲೆ ಹೆಚ್ಚು ಕೋಪಗೊಳ್ಳುವಂತೆ ಆತನಿಗೆ ವಿರುದ್ಧವಾದ ಅನೇಕ ಕಾರ್ಯಗಳನ್ನು ಮಾಡಿದರು. ಅವರಿಗಿಂತಲೂ ಮುಂಚೆ ಜೀವಿಸಿದ್ದ ಅವರ ಪೂರ್ವಿಕರಿಗಿಂತಲೂ ಈ ಜನರು ಹೆಚ್ಚು ಕೀಳಾಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೂದ್ಯರು ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. ಅವರು ತಮ್ಮ ಪೂರ್ವಿಕರಿಗಿಂತಲೂ ದುಷ್ಟರಾಗಿ ಆತನನ್ನು ರೇಗಿಸಿದರು.
Kannada BSI Bible 2016
ಆದರೆ ಯೆಹೂದದವರು ಕರ್ತನ ಸಮ್ಮುಖದಲ್ಲಿ ಕೆಟ್ಟತನ ಮಾಡಿ ತಮ್ಮ ಪಿತೃಗಳು ಮಾಡಿದ ಸಮಸ್ತ ಪಾಪಗಳಿ ಗಿಂತ ತಾವು ಹೆಚ್ಚಾಗಿ ಪಾಪಮಾಡಿ ಆತನಿಗೆ ರೋಷ ವನ್ನೆಬ್ಬಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದ್ಯರು ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಅವರು ತಮ್ಮ ಪಿತೃಗಳಿಗಿಂತಲೂ ದುಷ್ಟರಾಗಿ ಆತನನ್ನು ರೇಗಿಸಿದರು.
Kannada Bible (KNCL) BSI 2016
ಯೆಹೂದ್ಯರು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು. ತಮ್ಮ ಪಿತೃಗಳಿಗಿಂತಲೂ ದುಷ್ಟರಾಗಿ ಸರ್ವೇಶ್ವರನನ್ನು ರೇಗಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯೆಹೂದದವರು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟತನ ಮಾಡಿ, ತಮ್ಮ ಪಿತೃಗಳು ಮಾಡಿದ ಸಮಸ್ತ ಪಾಪಗಳಿಗಿಂತ, ತಾವು ಹೆಚ್ಚಾಗಿ ಪಾಪಮಾಡಿ ಯೆಹೋವ ದೇವರಿಗೆ ರೋಷವನ್ನೆಬ್ಬಿಸಿದರು.