1 Kings 14:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವಳು ಬಾಗಿಲಿನ ಬಳಿಗೆ ಬಂದಾಗಲೇ ಅಹೀಯನಿಗೆ ಆಕೆಯ ಪಾದಗಳ ಸಪ್ಪಳವು ಕೇಳಿಸಿತು. ಆಗ ಅಹೀಯನು, “ಯಾರೊಬ್ಬಾಮನ ಪತ್ನಿಯೇ, ಒಳಗೆ ಬಾ. ನೀನು ಯಾರೆಂಬುದು ಜನರಿಗೆ ತಿಳಿಯದಂತೆ ಮಾಡಲು ಯಾಕೆ ಪ್ರಯತ್ನಿಸುತ್ತಿರುವೆ? ನಾನು ನಿನಗೆ ಅಶುಭದ ಸುದ್ದಿಯನ್ನು ತಿಳಿಸುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯು ಅಹೀಯನ ಮನೆಯನ್ನು ಪ್ರವೇಶಿಸುತ್ತಿರುವಾಗಲೇ ಅಹೀಯನು ಆಕೆಯ ಕಾಲು ಸಪ್ಪಳವನ್ನು ಕೇಳಿ, “ಯಾರೊಬ್ಬಾಮನ ಹೆಂಡತಿಯೇ ಬಾ. ಯಾಕೆ ನಿನ್ನನ್ನು ಅನ್ಯಳೆಂದು ತೋರ್ಪಡಿಸಿಕೊಳ್ಳುತ್ತೀ? ನಿನಗೆ ಕಠಿಣವಾದ ಉತ್ತರ ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ.
Kannada BSI Bible 2016
ಅವಳು ಬಾಗಲಲ್ಲಿ ಪ್ರವೇಶಿಸುವಾಗ ಅಹೀಯನು ಅವಳ ಪಾದಗಳ ಶಬ್ದವನ್ನು ಕೇಳುತ್ತಲೇ--ಯಾರೊ ಬ್ಬಾಮನ ಪತ್ನಿಯೇ ಒಳಗೆ ಬಾ; ನೀನು ಮತ್ತೊಬ್ಬಳೆಂದು ತೋರಮಾಡುವದು ಯಾಕೆ? ಕಠಿಣವಾದ ಮಾತು ಗಳನ್ನು ತಿಳಿಸಲು ನನಗೆ ಅಪ್ಪಣೆಯಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು ಅಹೀಯನ ಮನೆಯನ್ನು ಪ್ರವೇಶಿಸುವಾಗಲೇ ಅಹೀಯನು ಆಕೆಯ ಕಾಲುಸಪ್ಪಳವನ್ನು ಕೇಳಿ - ಯಾರೊಬ್ಬಾಮನ ಹೆಂಡತಿಯೇ, ಬಾ; ಯಾಕೆ ನಿನ್ನನ್ನು ಅನ್ಯಳೆಂದು ತೋರ್ಪಡಿಸಿಕೊಳ್ಳುತ್ತೀ? ನಿನಗೆ ಕಠಿಣವಾದ ಉತ್ತರವನ್ನು ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ.
Kannada Bible (KNCL) BSI 2016
ಆಕೆ ಅಹೀಯನ ಮನೆಯನ್ನು ಪ್ರವೇಶಿಸುವಾಗಲೇ ಅಹೀಯನು ಆಕೆಯ ಕಾಲುಸಪ್ಪಳವನ್ನು ಕೇಳಿ, “ಯಾರೊಬ್ಬಾಮನ ಹೆಂಡತಿಯೇ, ಬಾ; ಏಕೆ ನೀನು ಅನ್ಯಳೆಂದು ನಟಿಸುತ್ತಿರುವೆ? ನಿನಗೆ ಕಠಿಣವಾದ ಉತ್ತರವನ್ನು ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನಂತರ ಅವಳು ಬಾಗಿಲಲ್ಲಿ ಪ್ರವೇಶಿಸುವಾಗ, ಅಹೀಯನು ಅವಳ ಹೆಜ್ಜೆಗಳ ಶಬ್ದ ಕೇಳುತ್ತಲೇ ಅವನು, “ಯಾರೊಬ್ಬಾಮನ ಪತ್ನಿಯೇ ಒಳಗೆ ಬಾ, ನೀನು ಮತ್ತೊಬ್ಬಳಂತೆ ತೋರಿಸಿಕೊಳ್ಳುವುದು ಏಕೆ? ನಾನು ಕಠಿಣವಾದವುಗಳನ್ನು ತಿಳಿಸಲು ನನಗೆ ಅಪ್ಪಣೆಯಾಗಿದೆ.