1 Kings 15:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಸನು ಮಾಡಿದ ಮಹಾಕಾರ್ಯಗಳನ್ನೂ ಅವನು ಕಟ್ಟಿಸಿದ ನಗರಗಳನ್ನೂ ಮತ್ತು ಅವನನ್ನು ಕುರಿತ ಇತರ ಸಂಗತಿಗಳನ್ನೂ “ಯೆಹೂದದ ರಾಜರುಗಳ ಚರಿತ್ರೆ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆಸನಿಗೆ ವಯಸ್ಸಾದಾಗ, ಅವನ ಕಾಲುಗಳಿಗೆ ರೋಗವಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಸನ ಉಳಿದ ಚರಿತ್ರೆ, ಅವನ ಎಲ್ಲಾ ಪರಾಕ್ರಮಕೃತ್ಯಗಳು, ಅವನು ಪಟ್ಟಣಗಳನ್ನು ಕಟ್ಟಿಸಿದ ಸಂಗತಿಗಳೂ, ಅವನ ಇತರ ಕಾರ್ಯಗಳು ಯೆಹೂದ್ಯರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ. ಮುಪ್ಪಿನಲ್ಲಿ ಅವನ ಕಾಲುಗಳಿಗೆ ರೋಗವುಂಟಾಯಿತು.
Kannada BSI Bible 2016
ಆಸನ ಮಿಕ್ಕಾದ ಎಲ್ಲಾ ಕ್ರಿಯೆಗಳೂ ಅವನ ಸಮಸ್ತ ಪರಾಕ್ರಮವೂ ಅವನು ಮಾಡಿದ್ದೆಲ್ಲವೂ ಅವನು ಕಟ್ಟಿಸಿದ ಪಟ್ಟಣಗಳೂ ಯೆಹೂದದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯ ಲ್ಪಡಲಿಲ್ಲವೋ? ಆದರೆ ತನ್ನ ವೃದ್ದಾಪ್ಯದ ಕಾಲದಲ್ಲಿ ಅವನು ತನ್ನ ಕಾಲುಗಳಲ್ಲಿ ಅಸ್ವಸ್ಥನಾಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಸನ ಉಳಿದ ಚರಿತ್ರೆ, ಅವನ ಎಲ್ಲಾ ಪರಾಕ್ರಮಕೃತ್ಯಗಳು, ಪಟ್ಟಣಗಳನ್ನು ಕಟ್ಟಿಸಿದ ಸಂಗತಿ ಇವುಗಳೂ ಅವನ ಇತರ ಕ್ರಿಯೆಗಳೂ ಯೆಹೂದರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. ಮುಪ್ಪಿನಲ್ಲಿ ಅವನ ಕಾಲುಗಳಿಗೆ ರೋಗವುಂಟಾಯಿತು.
Kannada Bible (KNCL) BSI 2016
ಆಸನ ಉಳಿದ ಚರಿತ್ರೆ, ಅವನ ಪರಾಕ್ರಮಕೃತ್ಯಗಳು, ಪಟ್ಟಣಗಳನ್ನು ಕಟ್ಟಿಸಿದ ಸಂಗತಿ ಹಾಗು ಅವನ ಇತರ ಕಾರ್ಯಕಲಾಪಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. ಮುಪ್ಪಿನಲ್ಲಿ ಅವನ ಕಾಲುಗಳಿಗೆ ರೋಗ ತಗಲಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಸನ ಉಳಿದ ಎಲ್ಲಾ ಕಾರ್ಯಗಳೂ, ಅವನ ಸಮಸ್ತ ಪರಾಕ್ರಮವೂ, ಅವನು ಮಾಡಿದ್ದೆಲ್ಲವೂ, ಅವನು ಕಟ್ಟಿಸಿದ ಪಟ್ಟಣಗಳೂ, ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಆದರೆ ತನ್ನ ವೃದ್ಧಾಪ್ಯದಲ್ಲಿ ಅವನ ಕಾಲುಗಳಿಗೆ ರೋಗ ತಗುಲಿತು.