1 Kings 16:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜಿಮ್ರಿಯು ಹೊಸ ರಾಜನಾದ ಮೇಲೆ ಬಾಷನ ಕುಟುಂಬದವರನ್ನೆಲ್ಲಾ ಕೊಂದುಹಾಕಿದನು. ಅವನು ಬಾಷನ ಕುಟುಂಬದಲ್ಲಿ ಯಾವ ಗಂಡಸನ್ನೂ ಬಿಡಲಿಲ್ಲ. ಬಾಷನ ಸ್ನೇಹಿತರನ್ನೂ ಜಿಮ್ರಿಯು ಕೊಂದುಹಾಕಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಸಿಂಹಾಸನದ ಮೇಲೆ ಕುಳಿತು ಆಳತೊಡಗಿದ ಕೂಡಲೇ ಬಾಷನ ಮನೆಯವರನ್ನೂ ಅವನ ಬಂಧು ಮಿತ್ರರನ್ನೂ ಸಂಹರಿಸಿದನು. ಅವರಲ್ಲಿ ಒಬ್ಬ ಗಂಡಸನ್ನೂ ಉಳಿಸಲಿಲ್ಲ.
Kannada BSI Bible 2016
ಅವನು ಆಳಲು ಆರಂಭಿಸಿದಾಗ ಏನಾಯಿತಂದರೆ, ಅವನು ಸಿಂಹಾ ಸನದ ಮೇಲೆ ಕುಳಿತು ಕೊಳ್ಳುತ್ತಲೇ ಬಾಷನ ಮನೆ ಯವರನ್ನೆಲ್ಲಾ ಕೊಂದುಹಾಕಿದನು. ಅವನ ಬಂಧು ಗಳಲ್ಲಿಯೂ ಸ್ನೇಹಿತರಲ್ಲಿಯೂ ಗಂಡಸರಾದ ಒಬ್ಬ ನನ್ನೂ ಅವನಿಗೆ ಉಳಿಸಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನು ಸಿಂಹಾಸನದ ಮೇಲೆ ಕೂತು ಆಳತೊಡಗಿದ ಕೂಡಲೆ ಬಾಷನ ಮನೆಯವರನ್ನೂ ಅವನ ಬಂಧು ವಿುತ್ರರನ್ನೂ ಸಂಹರಿಸಿದನು; ಅವರಲ್ಲಿ ಒಬ್ಬ ಗಂಡಸನ್ನೂ ಉಳಿಸಲಿಲ್ಲ.
Kannada Bible (KNCL) BSI 2016
ಇವನು ಸಿಂಹಾಸನದಲ್ಲಿ ಕುಳಿತು ಆಳತೊಡಗಿದ ಕೂಡಲೆ ಬಾಷನ ಮನೆಯವರನ್ನೂ ಅವನ ಬಂಧುಮಿತ್ರರನ್ನೂ ಉಳಿಸಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜಿಮ್ರಿಯು ಆಳಲು ಆರಂಭಿಸಿದಾಗ, ಅವನು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಲೇ, ಬಾಷನ ಮನೆಯವರನ್ನೆಲ್ಲಾ ಸಂಹರಿಸಿ, ಅವನ ಬಂಧುಗಳಲ್ಲಿಯೂ, ಅವನ ಸ್ನೇಹಿತರಲ್ಲಿಯೂ ಒಬ್ಬ ಗಂಡಸನನ್ನೂ ಉಳಿಸಲಿಲ್ಲ.