1 Kings 17:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಸ್ತ್ರೀಯು ಎಲೀಯನಿಗೆ, “ನೀನು ದೇವಮನುಷ್ಯ. ನೀನು ನನಗೆ ಸಹಾಯಮಾಡಲು ಬಂದಿರುವೆಯಾ? ಅಥವಾ ನನ್ನ ಪಾಪಗಳನ್ನೆಲ್ಲ ನನ್ನ ನೆನಪಿಗೆ ತಂದುಕೊಳ್ಳುವಂತೆ ಮಾಡಲು, ನನ್ನ ಮಗನಿಗೆ ಸಾವನ್ನು ಉಂಟುಮಾಡುವುದಕ್ಕಾಗಿಯೇ ಬಂದಿರುವೆಯಾ?” ಎಂದು ಕೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಆ ಸ್ತ್ರೀಯು ಎಲೀಯನಿಗೆ, “ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು ದೇವರ ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿರುವೆಯೋ?” ಎಂದಳು.
Kannada BSI Bible 2016
ಆಗ ಅವಳು ಎಲೀಯ ನಿಗೆ--ಓ ದೇವರ ಮನುಷ್ಯನೇ, ನನಗೂ ನಿನಗೂ ಏನು? ನನ್ನ ಅಕ್ರಮವನ್ನು ಜ್ಞಾಪಕಪಡಿಸುವ ದಕ್ಕೂ ನನ್ನ ಮಗನು ಸಾಯುವದಕ್ಕೂ ನನ್ನ ಬಳಿಗೆ ಬಂದಿಯೋ ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಆ ಸ್ತ್ರೀಯು ಎಲೀಯನಿಗೆ - ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು [ದೇವರ] ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವದಕ್ಕೆ ಬಂದಿಯೋ ಎನ್ನಲು ಅವನು ಆಕೆಗೆ -
Kannada Bible (KNCL) BSI 2016
ಆಗ ಆಕೆ ಎಲೀಯನಿಗೆ, “ದೈವಪುರುಷನೇ, ನನ್ನ ವಿರುದ್ಧ ನಿನಗೇನಿದೆ? ನೀನು ನನ್ನ ಪಾಪವನ್ನು ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿಯೋ?” ಎಂದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವಳು ಎಲೀಯನಿಗೆ, “ದೇವರ ಮನುಷ್ಯನೇ, ನನಗೂ ನಿನಗೂ ಏನು? ನನ್ನ ಅಕ್ರಮವನ್ನು ಜ್ಞಾಪಕಪಡಿಸುವುದಕ್ಕೂ, ನನ್ನ ಮಗನು ಸಾಯುವುದಕ್ಕೂ ನನ್ನ ಬಳಿಗೆ ಬಂದಿಯೋ?” ಎಂದಳು.