1 Kings 17:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಂತರ ಎಲೀಯನು, “ನನ್ನ ದೇವರಾದ ಯೆಹೋವನೇ, ಈ ವಿಧವೆಯು ತನ್ನ ಮನೆಯಲ್ಲಿ ನನಗೆ ಸ್ಥಳವನ್ನು ಕೊಟ್ಟಿದ್ದಾಳೆ. ನೀನು ಅವಳಿಗೆ ಈ ಕೇಡನ್ನು ಮಾಡುವೆಯಾ? ನೀನು ಅವಳ ಮಗುವನ್ನು ಸಾಯಿಸುವೆಯಾ?” ಎಂದು ಪ್ರಾರ್ಥಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಅವನು ಯೆಹೋವನಿಗೆ, “ನನ್ನ ದೇವರಾದ ಯೆಹೋವನೇ, ನನಗೆ ಸ್ಥಳಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ, ಆಕೆಗೆ ಕೇಡನ್ನುಂಟುಮಾಡಿದ್ದೇನು?” ಎಂದು ಕೇಳಿದನು.
Kannada BSI Bible 2016
ತನ್ನ ಮಂಚದ ಮೇಲೆ ಮಲಗಿಸಿ--ನನ್ನ ದೇವರಾದ ಕರ್ತನೇ, ನಾನು ವಾಸವಾಗಿರುವ ವಿಧವೆಯ ಮಗನನ್ನು ಕೊಂದು ಹಾಕುವ ಈ ಕೇಡನ್ನು ಅವಳ ಮೇಲೆ ಬರಮಾಡಿದಿಯಲ್ಲಾ ಎಂದು ಕರ್ತನನ್ನು ಕೂಗಿ ಬೇಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ದೇವರಾದ ಯೆಹೋವನೇ, ನನಗೆ ಸ್ಥಳಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ ಆಕೆಗೂ ಕೇಡನ್ನುಂಟುಮಾಡಿದ್ದೇನು ಎಂದು ಹೇಳಿ
Kannada Bible (KNCL) BSI 2016
ಅನಂತರ ಅವನು, “ನನ್ನ ದೇವರಾದ ಸರ್ವೇಶ್ವರಾ, ನನಗೆ ಆಶ್ರಯವಿತ್ತ ಈ ವಿಧವೆಯ ಮಗನನ್ನು ನೀವು ಸಾಯಿಸಿ ಆಕೆಗೂ ಕೇಡನ್ನುಂಟುಮಾಡಿದ್ದೇಕೆ?” ಎಂದು ಹೇಳಿ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನನ್ನ ದೇವರಾದ ಯೆಹೋವ ದೇವರೇ, ವಿಧವೆಯ ಮಗನನ್ನು ಕೊಂದುಹಾಕುವ ಈ ದುರಂತ ಅವಳ ಮೇಲೆ ಬರಮಾಡಿದಿಯಲ್ಲಾ?” ಎಂದು ಯೆಹೋವ ದೇವರನ್ನು ಕೂಗಿ ಬೇಡಿದನು.