1 Kings 18:6 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಂತೆಯೇ ನೀರನ್ನು ಕಂಡುಕೊಳ್ಳಲು ದೇಶದ ಒಂದು ಕಡೆಗೆ ಅಹಾಬನು, ಮತ್ತೊಂದು ಕಡೆಗೆ ಓಬದ್ಯನು ಹೊರಟರು. ಅವರಿಬ್ಬರೂ ದೇಶವನ್ನೆಲ್ಲಾ ಸಂಚರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಸಂಚಾರಕ್ಕಾಗಿ ದೇಶವನ್ನು ಎರಡು ಭಾಗ ಮಾಡಿ ಒಂದು ಭಾಗಕ್ಕೆ ಓಬದ್ಯನನ್ನು ಕಳುಹಿಸಿ ಇನ್ನೊಂದು ಕಡೆ ತಾನೇ ಹೊರಟುಹೋದನು.
Kannada BSI Bible 2016
ಅವರು ದೇಶವನ್ನು ಹಾದು ಹೋಗಲು ಅದನ್ನು ವಿಭಾಗ ಮಾಡಿಕೊಂಡು ಅಹಾಬನು ಒಂದು ಮಾರ್ಗದಲ್ಲಿಯೂ ಓಬದ್ಯನು ಮತ್ತೊಂದು ಮಾರ್ಗದಲ್ಲಿಯೂ ಪ್ರತ್ಯೇಕ ವಾಗಿ ಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಂಚಾರಕ್ಕಾಗಿ ದೇಶವನ್ನು ಎರಡು ಭಾಗಮಾಡಿ ಒಂದು ಭಾಗಕ್ಕೆ ಓಬದ್ಯನನ್ನು ಕಳುಹಿಸಿ ಇನ್ನೊಂದು ಭಾಗಕ್ಕೆ ತಾನೇ ಹೊರಟುಹೋದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ದೇಶವನ್ನು ಹಾದು ಹೋಗಲು, ಅದನ್ನು ವಿಭಾಗ ಮಾಡಿಕೊಂಡು ಅಹಾಬನು ಒಂದು ಮಾರ್ಗದಲ್ಲಿಯೂ, ಓಬದ್ಯನು ಮತ್ತೊಂದು ಮಾರ್ಗದಲ್ಲಿಯೂ ಪ್ರತ್ಯೇಕವಾಗಿ ಹೋದರು.