1 Kings 19:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು, “ನೀನು ಬಂದ ದಾರಿಯಿಂದ ಹಿಂತಿರುಗಿ ದಮಸ್ಕದ ಅರಣ್ಯಕ್ಕೆ ಹೋಗು. ಅಲ್ಲಿಂದ ದಮಸ್ಕಕ್ಕೆ ಹೋಗಿ, ಹಜಾಯೇಲನನ್ನು ಅರಾಮ್ಯರ ರಾಜನನ್ನಾಗಿ ಅಭಿಷೇಕಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೆಹೋವನು ಅವನಿಗೆ, “ನೀನು ಬಂದ ದಾರಿಯಿಂದ ಹಿಂದಿರುಗಿ ದಮಸ್ಕದ ಅರಣ್ಯಕ್ಕೆ ಹೋಗು, ಅಲ್ಲಿಂದ ಪಟ್ಟಣದೊಳಗೆ ಪ್ರವೇಶಿಸಿ ಹಜಾಯೇಲನನ್ನು ಅರಾಮ್ಯರ ಅರಸನನ್ನಾಗಿ ಅಭಿಷೇಕಿಸು.
Kannada BSI Bible 2016
ಆಗ ಕರ್ತನು ಅವನಿಗೆ--ನೀನು ಹೋಗಿ ನಿನ್ನ ಮಾರ್ಗದಲ್ಲಿ ದಮಸ್ಕದ ಅರಣ್ಯಕ್ಕೆ ತಿರಿಗಿಕೊಂಡು ಒಳಗೆ ಹೋಗಿ ಹಜಾಯೇಲನನ್ನು ಅರಾಮಿನ ಮೇಲೆ ಅರಸನಾಗಿರಲು ಅಭಿಷೇಕಿಸು. ಇದಲ್ಲದೆ ನಿಂಷಿಯನ ಮಗನಾದ ಯೇಹುವನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕಿಸಿ, ಅಬೇಲ್‌ಮೆಹೋಲ ಊರಿನವನಾದ ಶಾಫಾಟನ ಮಗನಾಗಿರುವ ಎಲೀಷ ನನ್ನು ನಿನಗೆ ಬದಲಾಗಿ ಪ್ರವಾದಿಯಾಗಿರಲು ಅಭಿ ಷೇಕಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯೆಹೋವನು ಅವನಿಗೆ - ನೀನು ಬಂದ ದಾರಿಯಿಂದ ಹಿಂದಿರುಗಿ ದಮಸ್ಕದ ಅರಣ್ಯಕ್ಕೆ ಹೋಗು; ಅಲ್ಲಿಂದ ಪಟ್ಟಣದೊಳಗೆ ಪ್ರವೇಶಿಸಿ ಹಜಾಯೇಲನನ್ನು ಅರಾಮ್ಯರ ಅರಸನನ್ನಾಗಿ ಅಭಿಷೇಕಿಸು;
Kannada Bible (KNCL) BSI 2016
ಆಗ ಸರ್ವೇಶ್ವರ, “ನೀನು ಬಂದ ದಾರಿಯಲ್ಲೇ ಹಿಂದಿರುಗಿ ದಮಸ್ಕದ ಮರುಭೂಮಿಗೆ ಹೋಗು; ಅಲ್ಲಿಂದ ಪಟ್ಟಣದೊಳಗೆ ಹೋಗಿ ಹಜಾಯೇಲನನ್ನು ಸಿರಿಯಾದವರ ಅರಸನನ್ನಾಗಿ ಅಭಿಷೇಕಿಸು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೋವ ದೇವರು ಅವನಿಗೆ, “ನೀನು ಬಂದ ಮಾರ್ಗದಲ್ಲಿ ದಮಸ್ಕದ ಮರುಭೂಮಿಗೆ ತಿರುಗಿಕೊಂಡು ಹೋಗಿ, ಅಲ್ಲಿ ತಲುಪಿದಾಗ, ಹಜಾಯೇಲನನ್ನು ಅರಾಮಿನ ಮೇಲೆ ಅರಸನಾಗಿರಲು ಅಭಿಷೇಕಿಸು.