1 Kings 2:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾವೀದನು ಇಸ್ರೇಲನ್ನು ನಲವತ್ತು ವರ್ಷಗಳ ಕಾಲ ಆಳಿದನು. ಅವನು ಏಳು ವರ್ಷ ಹೆಬ್ರೋನಿನಲ್ಲೂ ಮೂವತ್ತಮೂರು ವರ್ಷ ಜೆರುಸಲೇಮಿನಲ್ಲೂ ಆಡಳಿತ ನಡೆಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾವೀದನು ಇಸ್ರಾಯೇಲರನ್ನು ಆಳಿದ್ದು ಒಟ್ಟು ನಲ್ವತ್ತು ವರ್ಷ. ಹೇಗೆಂದರೆ, ಹೆಬ್ರೋನಿನಲ್ಲಿ ಏಳು ವರ್ಷ ಮತ್ತು ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳ್ವಿಕೆ ಮಾಡಿದನು.
Kannada BSI Bible 2016
ದಾವೀದನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರುಷಗಳು. ಏಳು ವರುಷ ಹೆಬ್ರೋನಿನಲ್ಲಿ ಆಳಿದನು; ಮೂವತ್ತು ಮೂರು ವರುಷ ಯೆರೂಸಲೇಮಿನಲ್ಲಿ ಆಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾವೀದನು ಇಸ್ರಾಯೇಲ್ಯರನ್ನು ಆಳಿದ್ದು ನಾಲ್ವತ್ತು ವರುಷ. ಹೇಗಂದರೆ - ಹೆಬ್ರೋನಿನಲ್ಲಿ ಏಳು ವರುಷ, ಯೆರೂಸಲೇವಿುನಲ್ಲಿ ಮೂವತ್ತ ಮೂರು ವರುಷ ಆಳಿದನು.
Kannada Bible (KNCL) BSI 2016
ದಾವೀದನು ಇಸ್ರಯೇಲರನ್ನು ಆಳಿದ್ದು ನಾಲ್ವತ್ತು ವರ್ಷ; ಹೆಬ್ರೋನಿನಲ್ಲಿ ಏಳು ವರ್ಷ, ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಾವೀದನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರ್ಷಗಳು. ಏಳು ವರ್ಷ ಹೆಬ್ರೋನಿನಲ್ಲಿ ಆಳಿದನು. ಮೂವತ್ತಮೂರು ವರ್ಷ ಯೆರೂಸಲೇಮಿನಲ್ಲಿ ಆಳಿದನು.