1 Kings 2:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಸಮಯದಲ್ಲಿ ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಹತ್ತಿರಕ್ಕೆ ಹೋದನು. ಬತ್ಷೆಬೆಳು, “ನೀನು ಸಮಾಧಾನದಿಂದ ಬಂದೆಯಾ?” ಎಂದು ಅವನನ್ನು ಕೇಳಿದಳು. ಅದೋನೀಯನು, “ಹೌದು, ಇದು ಸಮಾಧಾನದ ಭೇಟಿಯಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಆಕೆಯು ಅವನನ್ನು, “ನೀನು ಸಮಾಧಾನದಿಂದ ಬಂದಿರುವೆಯೋ?” ಎಂದು ಕೇಳಿದಳು. ಅವನು, “ಹೌದು ಸಮಾಧಾನದಿಂದ ಬಂದೆನು” ಎಂದನು.
Kannada BSI Bible 2016
ಆದರೆ ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಬಳಿಗೆ ಬಂದನು. ಆಕೆಯು ಅವನಿಗೆ--ಸಮಾಧಾನವಾಗಿ ಬರುತ್ತೀಯೋ ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಆಕೆಯು ಅವನನ್ನು - ನೀನು ಸಮಾಧಾನದಿಂದ ಬಂದಿರುತ್ತೀಯೋ ಎಂದು ಕೇಳಲು ಅವನು - ಹೌದು, ಸಮಾಧಾನದಿಂದ ಬಂದೆನು ಎಂದನು.
Kannada Bible (KNCL) BSI 2016
ಹಗ್ಗೀತಳ ಮಗ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಆಕೆ ಅವನನ್ನು, “ನೀನು ಸಮಾಧಾನದಿಂದ ಬಂದಿರುತ್ತೀಯೋ?” ಎಂದು ಕೇಳಿದಳು. ಅವನು, “ಹೌದು, ಸಮಾಧಾನದಿಂದ ಬಂದಿದ್ದೇನೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಹಗ್ಗೀತಳ ಮಗ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಬತ್ಷೆಬೆಳು ಅವನಿಗೆ, “ಸಮಾಧಾನವಾಗಿ ಬರುತ್ತೀಯೋ?” ಎಂದಳು. ಅದಕ್ಕೆ ಅವನು, “ಸಮಾಧಾನವೇ,” ಎಂದನು.