1 Kings 2:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬತ್ಷೆಬೆಳು ರಾಜನಾದ ಸೊಲೊಮೋನನೊಂದಿಗೆ ಮಾತನಾಡಲು ಹೋದಳು. ಸೊಲೊಮೋನನು ಆಕೆಯನ್ನು ಕಂಡು ಎದ್ದುನಿಂತು ಅವಳಿಗೆ ಬಾಗಿ ನಮಸ್ಕರಿಸಿ, ಸಿಂಹಾಸನದ ಮೇಲೆ ಕುಳಿತನು. ಅವನು ತನ್ನ ತಾಯಿಗಾಗಿ ಮತ್ತೊಂದು ಸಿಂಹಾಸನವನ್ನು ತರಲು ಕೆಲವು ಸೇವಕರಿಗೆ ಹೇಳಿದನು. ನಂತರ ಅವಳು ಅವನ ಬಲಗಡೆಯಲ್ಲಿ ಕುಳಿತಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯು ಅದೋನೀಯನಿಗಾಗಿ ಮಾತನಾಡುವುದಕ್ಕೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಬರುತ್ತಿರುವಾಗ ಅರಸನು ಎದ್ದುಹೋಗಿ ಆಕೆಯನ್ನು ಎದುರುಗೊಂಡು ನಮಸ್ಕರಿಸಿದನು. ಅನಂತರ ತಾನು ಸಿಂಹಾಸನದ ಮೇಲೆ ಕುಳಿತು, ರಾಜ ಮಾತೆಗೋಸ್ಕರ ಒಂದು ಆಸನವನ್ನು ತರಿಸಲು ಆಕೆಯು ಅವನ ಬಲಗಡೆಯಲ್ಲಿ ಕುಳಿತುಕೊಂಡಳು.
Kannada BSI Bible 2016
ಆದದರಿಂದ ಬತ್ಷೆಬೆಳು ಅದೋನೀಯನಿಗೋಸ್ಕರ ಮಾತನಾಡುವದಕ್ಕೆ ಅರಸ ನಾದ ಸೊಲೊಮೋನನ ಬಳಿಗೆ ಹೋದಳು. ಅರಸನು ಅವಳನ್ನು ಎದುರುಗೊಳ್ಳಲು ಎದ್ದು ಅವಳಿಗೆ ಅಡ್ಡಬಿದ್ದು ತಾನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಅರಸನ ತಾಯಿಗೋಸ್ಕರ ಆಸನವನ್ನು ಹಾಕಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು ಅದೋನೀಯನಿಗಾಗಿ ಮಾತಾಡುವದಕ್ಕೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಬರುತ್ತಿರುವಾಗ ಅರಸನು ಎದ್ದುಹೋಗಿ ಆಕೆಯನ್ನು ಎದುರುಗೊಂಡು ನಮಸ್ಕರಿಸಿದನು. ಅನಂತರ ತಾನು ಸಿಂಹಾಸನದ ಮೇಲೆ ಕೂತು ರಾಜಮಾತೆಗೋಸ್ಕರ ಒಂದು ಆಸನವನ್ನು ತರಿಸಲು ಆಕೆಯು ಅವನ ಬಲಗಡೆಯಲ್ಲಿ ಕೂತುಕೊಂಡು -
Kannada Bible (KNCL) BSI 2016
ಆಕೆ ಅದೋನೀಯನ ಪರವಾಗಿ ಮಾತಾಡಲು ಅರಸ ಸೊಲೊಮೋನನ ಬಳಿಗೆ ಬರುತ್ತಿರುವಾಗ ಅರಸನೇ ಎದ್ದುಹೋಗಿ ಆಕೆಯನ್ನು ಎದುರುಗೊಂಡು ನಮಸ್ಕರಿಸಿದನು. ಅನಂತರ ತಾನು ಸಿಂಹಾಸನದ ಮೇಲೆ ಕುಳಿತು ರಾಜಮಾತೆಗಾಗಿ ಒಂದು ಆಸನವನ್ನು ತರಿಸಿದನು. ಆಕೆ ಅವನ ಬಲಗಡೆಯಲ್ಲಿ ಕುಳಿತುಕೊಂಡಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಬತ್ಷೆಬೆಳು ಅದೋನೀಯನಿಗೋಸ್ಕರ ಮಾತನಾಡುವುದಕ್ಕೆ ಅರಸನಾದ ಸೊಲೊಮೋನನ ಬಳಿಗೆ ಹೋದಳು. ಅರಸನು ಅವಳನ್ನು ಎದುರುಗೊಳ್ಳಲು ಎದ್ದು, ಅವಳಿಗೆ ಅಡ್ಡಬಿದ್ದು, ತಾನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ರಾಜಮಾತೆಗೋಸ್ಕರ ಆಸನವನ್ನು ಹಾಕಿಸಿದನು. ಅವಳು ಅವನ ಬಲಗಡೆಯಲ್ಲಿ ಕುಳಿತುಕೊಂಡಳು.