1 Kings 2:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬತ್ಷೆಬೆಳು ಅವನಿಗೆ, “ನಿನ್ನಲ್ಲಿ ಒಂದು ಸಣ್ಣ ಕೋರಿಕೆಯಿದೆ, ಅದನ್ನು ದಯವಿಟ್ಟು ನಿರಾಕರಿಸದಿರು” ಎಂದು ಕೇಳಿದಳು. ರಾಜನು, “ನನ್ನ ತಾಯಿಯೇ, ನಿನ್ನ ಕೋರಿಕೆಯೇನು? ನಾನು ನಿನ್ನ ಕೋರಿಕೆಯನ್ನು ನಿರಾಕರಿಸುವುದಿಲ್ಲ” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಆಕೆಯು, “ಒಂದು ಸಣ್ಣ ಬಿನ್ನಹ ಉಂಟು. ಅದನ್ನು ತಿರಸ್ಕರಿಸಬೇಡ” ಎಂದು ಹೇಳಿದಳು. ಅರಸನು, “ನನ್ನ ತಾಯಿಯೇ ಏನು ಬೇಕು ಕೇಳು, ನಾನು ಆಗದು ಅನ್ನುವುದಿಲ್ಲ” ಎಂದನು.
Kannada BSI Bible 2016
ಅವಳು ಅವನ ಬಲಗಡೆಯಲ್ಲಿ ಕುಳಿತುಕೊಂಡಳು. ಅವಳು ಅವನಿಗೆ--ನಿನ್ನಿಂದ ಒಂದು ಚಿಕ್ಕ ಮನವಿ ಕೇಳುತ್ತೇನೆ; ಆಗುವದಿಲ್ಲವೆಂದು ಹೇಳಬೇಡ ಅಂದಳು. ಅರಸನು ಅವಳಿಗೆ--ನನ್ನ ತಾಯಿಯೇ, ಕೇಳು; ನಾನು ನಿನ್ನ ಮಾತಿಗೆ ಆಗುವದಿಲ್ಲವೆಂದು ಹೇಳುವದಿಲ್ಲ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದು ಸಣ್ಣ ಬಿನ್ನಹ ಉಂಟು, ಅದನ್ನು ತಿರಸ್ಕರಿಸಬೇಡ ಎಂದು ಹೇಳಿದಳು. ಅರಸನು - ನನ್ನ ತಾಯಿಯೇ, ಏನು ಬೇಕು, ಕೇಳು; ನಾನು ಆಗದು ಅನ್ನುವದಿಲ್ಲ ಎಂದನ್ನಲು
Kannada Bible (KNCL) BSI 2016
“ಒಂದು ಸಣ್ಣ ಬಿನ್ನಹವಿದೆ, ತಿರಸ್ಕರಿಸಬೇಡ,” ಎಂದು ಹೇಳಿದಳು. ಅರಸನು, “ತಾಯೇ, ಏನು ಬೇಕು, ಕೇಳಿ; ನಾನು ಆಗದು ಎನ್ನುವುದಿಲ್ಲ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳು ಅವನಿಗೆ, “ನಿನ್ನಿಂದ ಒಂದು ಚಿಕ್ಕ ಬಿನ್ನಹವಿದೆ, ಆಗುವುದಿಲ್ಲವೆಂದು ಹೇಳಬೇಡ,” ಎಂದಳು. ಅರಸನು ಅವಳಿಗೆ, “ನನ್ನ ತಾಯಿಯೇ ಕೇಳು. ಏಕೆಂದರೆ ನಾನು ನಿನ್ನ ಮಾತಿಗೆ ಆಗುವುದಿಲ್ಲವೆಂದು ಹೇಳುವುದಿಲ್ಲ,” ಎಂದನು.