1 Kings 2:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನು ಎಬ್ಯಾತಾರನಿಗೆ, “ನಾನು ನಿನ್ನನ್ನು ಯೆಹೋವನ ಯಾಜಕನಾಗಿ ಸೇವೆಯಲ್ಲಿ ಮುಂದುವರಿಸುವುದಿಲ್ಲ” ಎಂದು ಹೇಳಿದನು. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಇದು ಶೀಲೋವಿನಲ್ಲಿ ದೇವರು ಯಾಜಕನಾದ ಏಲಿಗೂ ಅವನ ಕುಟುಂಬದವರಿಗೂ ಹೇಳಿದಂತೆಯೇ ಆಯಿತು. ಎಬ್ಯಾತಾರನು ಏಲಿಯ ಗೋತ್ರದವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೊಲೊಮೋನನು ಅವನನ್ನು ಯೆಹೋವನ ಯಾಜಕೋದ್ಯೋಗದಿಂದ ತೆಗೆದುಹಾಕಿದನು. ಹೀಗೆ ಯೆಹೋವನು ಶೀಲೋವಿನಲ್ಲಿದ್ದ ಏಲಿಯ ಮನೆಯನ್ನು ಕುರಿತು ಹೇಳಿದ ಮಾತು ನೆರವೇರಿತು.
Kannada BSI Bible 2016
ಹೀಗೆಯೇ ಕರ್ತನು ಶೀಲೋ ವಿನಲ್ಲಿ ಏಲಿಯ ಮನೆಯನ್ನು ಕುರಿತು ಹೇಳಿದ ವಾಕ್ಯವು ಈಡೇರುವದಕ್ಕೆ ಸೊಲೊಮೋನನು ಎಬ್ಯಾತಾರನನ್ನು ಕರ್ತನಿಗೆ ಯಾಜಕನಾಗಿರದ ಹಾಗೆ ಹೊರಡಿಸಿಬಿಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಹೊತ್ತು ನಿನ್ನನ್ನು ಕೊಲ್ಲಿಸುವದಿಲ್ಲ ಎಂದು ಹೇಳಿ ಅವನನ್ನು ಯೆಹೋವನ ಯಾಜಕೋದ್ಯೋಗದಿಂದ ತಳ್ಳಿಬಿಟ್ಟನು. ಹೀಗೆ ಯೆಹೋವನು ಶೀಲೋವಿನಲ್ಲಿದ್ದ ಏಲಿಯ ಮನೆಯನ್ನು ಕುರಿತು ಹೇಳಿದ ಮಾತು ನೆರವೇರಿತು.
Kannada Bible (KNCL) BSI 2016
ಈ ದಿನ ನಿನ್ನನ್ನು ಕೊಲ್ಲಿಸುವುದಿಲ್ಲ,” ಎಂದು ಹೇಳಿದನು. ಆದರೆ ಅವನನ್ನು ಸರ್ವೇಶ್ವರನ ಯಾಜಕವೃತ್ತಿಯಿಂದ ತೆಗೆದುಬಿಟ್ಟನು. ಹೀಗೆ ಸರ್ವೇಶ್ವರ ಶಿಲೋವಿನಲ್ಲಿದ್ದ ಏಲಿಯ ಮನೆಯನ್ನು ಕುರಿತು ಭವಿಷ್ಯ ಹೇಳಿದ ಮಾತು ನೆರವೇರಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆಯೇ ಯೆಹೋವ ದೇವರು ಶೀಲೋವಿನಲ್ಲಿ ಏಲಿಯ ಮನೆಯನ್ನು ಕುರಿತು ಹೇಳಿದ ವಾಕ್ಯವು ಈಡೇರುವುದಕ್ಕೆ ಸೊಲೊಮೋನನು ಅಬಿಯಾತರನನ್ನು ಯೆಹೋವ ದೇವರಿಗೆ ಯಾಜಕನಾಗಿರದ ಹಾಗೆ ಹೊರಡಿಸಿಬಿಟ್ಟನು.