1 Kings 2:42 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನು ಶಿಮ್ಮಿಯನ್ನು ಕರೆಯಿಸಿ, “ನೀನು ಜೆರುಸಲೇಮನ್ನು ಬಿಟ್ಟುಹೋದರೆ ಮರಣಶಿಕ್ಷೆಯಾಗುವುದೆಂದು ನಾನು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದೆನು. ನೀನು ಬೇರೆಲ್ಲಾದರೂ ಹೋದರೆ ಅದು ನಿನ್ನ ಸ್ವಂತ ತಪ್ಪಾಗುವುದೆಂದೂ ನಿನ್ನನ್ನು ಕೊಲ್ಲಲಾಗುವುದೆಂದೂ ನಾನು ನಿನ್ನನ್ನು ಎಚ್ಚರಿಸಿದ್ದೆನು. ಅದಕ್ಕೆ ನೀನೂ ಒಪ್ಪಿಗೆ ನೀಡಿ ನನಗೆ ವಿಧೇಯನಾಗಿರುವುದಾಗಿ ತಿಳಿಸಿದ್ದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀನು ಈ ಊರನ್ನು ಬಿಟ್ಟು ಎಲ್ಲಿಗಾದರೂ ಹೋದರೆ ಅದೇ ದಿನದಲ್ಲಿ ನಿನಗೆ ಮರಣ ಶಿಕ್ಷೆಯಾಗುವುದು ಎಂದು ಖಂಡಿತವಾಗಿ ಹೇಳಿ ಯೆಹೋವನ ಹೆಸರಿನಲ್ಲಿ ನಿನ್ನಿಂದ ಪ್ರಮಾಣ ತೆಗೆದುಕೊಂಡೆನಲ್ಲವೋ? ಆಗ, ‘ನೀನು ಹೇಳುವುದು ಒಳ್ಳೇಯದು, ಹಾಗೆಯೇ ಮಾಡುತ್ತೇನೆ’ ಎಂದು ಹೇಳಿದಿಯಲ್ಲಾ.
Kannada BSI Bible 2016
ಆಗ ಅರಸನು ಶಿಮ್ಮಿಯನ್ನು ಕರೇ ಕಳುಹಿಸಿ ಅವನಿಗೆ--ನಿಶ್ಚಯವಾಗಿ ನೀನು ಯಾವ ದಿನದಲ್ಲಿ ಹೊರಟು ಎಲ್ಲಿಗಾದರೂ ಹೋದರೆ ಅದೇ ದಿನದಲ್ಲಿ ನಿಶ್ಚಯವಾಗಿ ಸಾಯುವಿ ಎಂದು ಖಂಡಿತವಾಗಿ ತಿಳಿದುಕೋ ಎಂಬದಾಗಿ ನಾನು ನಿನಗೆ ದೃಢವಾಗಿ ಹೇಳಿ ಕರ್ತನ ಹೆಸರಿನಲ್ಲಿ ನಿನ್ನಿಂದ ಪ್ರಮಾಣಮಾಡಿ ಸಲಿಲ್ಲವೋ? ನಾನು ಹೇಳಿದ ಮಾತು ಒಳ್ಳೇದೆಂದು ನೀನು ಹೇಳಲಿಲ್ಲವೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಈ ಊರನ್ನು ಬಿಟ್ಟು ಎಲ್ಲಿಗಾದರೂ ಹೋದರೆ ಅದೇ ದಿನದಲ್ಲಿ ನಿನಗೆ ಮರಣಶಿಕ್ಷೆಯಾಗುವದೆಂದು ಖಂಡಿತವಾಗಿ ಹೇಳಿ ಯೆಹೋವನ ಹೆಸರಿನಲ್ಲಿ ನಿನ್ನಿಂದ ಪ್ರಮಾಣತೆಗೆದುಕೊಂಡೆನಲ್ಲವೋ?
Kannada Bible (KNCL) BSI 2016
“ನೀನು ಈ ಊರನ್ನು ಬಿಟ್ಟು ಎಲ್ಲಿಗಾದರು ಹೋದರೆ ಅದೇ ದಿನದಲ್ಲಿ ನಿನಗೆ ಮರಣಶಿಕ್ಷೆಯಾಗುವುದೆಂದು ಖಂಡಿತವಾಗಿ ಹೇಳಿ ಸರ್ವೇಶ್ವರನ ಹೆಸರಿನಲ್ಲಿ ನಿನ್ನಿಂದ ಪ್ರಮಾಣ ತೆಗೆದುಕೊಂಡನಲ್ಲವೆ? ಆಗ ನೀನು, ‘ಒಳ್ಳೆಯದು, ಹಾಗೆಯೇ ಮಾಡುತ್ತೇನೆ,’ ಎಂದು ಹೇಳಿದೆಯಲ್ಲವೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಸನು ಶಿಮ್ಮಿಯನ್ನು ಕರೆಕಳುಹಿಸಿ ಅವನಿಗೆ, “ನೀನು ಯಾವ ದಿವಸದಲ್ಲಿ ಹೊರಟು ಎಲ್ಲಿಗಾದರೂ ಹೋದರೆ, ಅದೇ ದಿವಸದಲ್ಲಿ ನಿಶ್ಚಯವಾಗಿ ಸಾಯುವೆ, ಎಂದು ಖಂಡಿತವಾಗಿ ತಿಳಿದುಕೋ, ಎಂಬುದಾಗಿ ನಾನು ನಿನಗೆ ದೃಢವಾಗಿ ಹೇಳಿ, ಯೆಹೋವ ದೇವರ ಹೆಸರಿನಲ್ಲಿ ನಿನ್ನಿಂದ ಪ್ರಮಾಣ ಮಾಡಿಸಲಿಲ್ಲವೋ? ನಾನು ಹೇಳಿದ ಮಾತುಒಳ್ಳೆಯದೆಂದು ನೀನು ಹೇಳಲಿಲ್ಲವೋ?