1 Kings 2:43 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ದೇವರಿಗೆ ಮಾಡಿದ ಪ್ರಮಾಣವನ್ನು ಯಾಕೆ ಕೈಕೊಳ್ಳಲಿಲ್ಲ? ನೀನು ನನ್ನ ಆಜ್ಞೆಗೆ ಯಾಕೆ ವಿಧೇಯನಾಗಲಿಲ್ಲ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಾಗಾದರೆ ಯೆಹೋವನ ಹೆಸರಿನಲ್ಲಿ ನೀನು ಮಾಡಿದ ಪ್ರಮಾಣವನ್ನೂ ನಾನು ನಿನಗೆ ಕೊಟ್ಟ ಅಪ್ಪಣೆಯನ್ನೂ ನೀನು ಯಾಕೆ ಕೈಕೊಳ್ಳಲಿಲ್ಲ” ಎಂದನು.
Kannada BSI Bible 2016
ನೀನು ಕರ್ತನ ಆಣೆ ಯನ್ನೂ ನಾನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನೂ ನೀನು ಕೈಕೊಳ್ಳದೆ ಇದ್ದದ್ದೇನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ನೀನು - ಒಳ್ಳೇದು, ಹಾಗೆಯೇ ಮಾಡುತ್ತೇನೆ ಎಂದು ಹೇಳಿದಿಯಲ್ಲಾ. ಹಾಗಾದರೆ ಯೆಹೋವನ ಹೆಸರಿನಲ್ಲಿ ನೀನು ಮಾಡಿದ ಪ್ರಮಾಣವನ್ನೂ ನಾನು ನಿನಗೆ ಕೊಟ್ಟ ಅಪ್ಪಣೆಯನ್ನೂ ಯಾಕೆ ಕೈಕೊಳ್ಳಲಿಲ್ಲ ಅಂದನು.
Kannada Bible (KNCL) BSI 2016
ಹಾಗಾದರೆ, ಸರ್ವೇಶ್ವರನ ಹೆಸರಿನಲ್ಲಿ ನೀನು ಮಾಡಿದ ಪ್ರಮಾಣವನ್ನೂ ನಾನು ನಿನಗೆ ಕೊಟ್ಟ ಅಪ್ಪಣೆಯನ್ನೂ ಏಕೆ ಕೈಗೊಳ್ಳಲಿಲ್ಲ?” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಯೆಹೋವ ದೇವರ ಆಣೆಯನ್ನೂ, ನಾನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನೂ ನೀನು ಕೈಗೊಳ್ಳದೆ ಇದ್ದದ್ದೇನು?” ಎಂದನು.