1 Kings 20:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮಧ್ಯಾಹ್ನದ ವೇಳೆಗೆ, ರಾಜನಾದ ಬೆನ್ಹದದನು ಮತ್ತು ಅವನ ಸಹಾಯಕ್ಕಾಗಿ ಬಂದಿದ್ದ ಮೂವತ್ತೆರಡು ಮಂದಿ ರಾಜರು, ಅವರ ಗುಡಾರಗಳಲ್ಲಿ ಕುಡಿಯುತ್ತಾ ಮತ್ತೇರಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ರಾಜನಾದ ಅಹಾಬನ ಆಕ್ರಮಣವು ಆರಂಭವಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮಧ್ಯಾಹ್ನದಲ್ಲಿ ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಜನರು ಅರಸರ ಸಂಗಡ ಮದ್ಯಪಾನ ಮಾಡಿ ಮತ್ತರಾಗಿ ಡೇರೆಯಲ್ಲಿ ಕುಳಿತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು.
Kannada BSI Bible 2016
ಅವರು ಮಧ್ಯಾಹ್ನದಲ್ಲಿ ಹೊರಟರು; ಆದರೆ ಬೆನ್ಹದದನೂ ಅವನ ಸಹಾಯ ಕರಾದ ಮೂವತ್ತೆರಡು ಮಂದಿ ಅರಸುಗಳೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮಧ್ಯಾಹ್ನದಲ್ಲಿ ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಮಂದಿ ಅರಸರ ಸಂಗಡ ಮದ್ಯಪಾನಮಾಡಿ ಮತ್ತನಾಗಿ ಡೇರೆಯಲ್ಲಿ ಕೂತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು.
Kannada Bible (KNCL) BSI 2016
ಮಧ್ಯಾಹ್ನದಲ್ಲಿ, ಬೆನ್ಹದದನು ತನ್ನ ಸಹಾಯಕ್ಕಾಗಿ ಬಂದ ಮೂವತ್ತೆರಡು ಮಂದಿ ರಾಜರ ಸಂಗಡ ಮದ್ಯಪಾನಮಾಡಿ ಮತ್ತನಾಗಿ, ಡೇರೆಯಲ್ಲಿ ಕುಳಿತುಕೊಂಡಿದ್ದಾಗ ಇವರು ಪಟ್ಟಣದಿಂದ ಹೊರಗೆ ಬಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಮಧ್ಯಾಹ್ನದಲ್ಲಿ ಹೊರಟರು. ಆದರೆ ಬೆನ್ಹದದನೂ, ಅವರ ಸಹಾಯಕರಾದ ಮೂವತ್ತೆರಡು ಮಂದಿ ಅರಸರೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು.