1 Kings 20:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನಾದ ಅಹಾಬನು ತಾನು ಬೆನ್ಹದದನನ್ನು ಕೊಲ್ಲುವುದಿಲ್ಲವೆಂಬುದನ್ನು ಯಾವುದಾದರೂ ಸೂಚನೆಯ ಮೂಲಕ ತಿಳಿಸಬಹುದೆಂದು ಬೆನ್ಹದದನ ಜನರು ಅಪೇಕ್ಷೆಪಟ್ಟಿದ್ದರು. ಅಹಾಬನು ಬೆನ್ಹದದನನ್ನು ತನ್ನ ಸೋದರನೆಂದು ಕರೆದಾಗ, ಸಲಹೆಗಾರರು ತ್ವರಿತವಾಗಿ, “ಹೌದು! ಬೆನ್ಹದದನು ನಿನ್ನ ಸೋದರನೇ” ಎಂದರು. ಅಹಾಬನು, “ಅವನನ್ನು ನನ್ನ ಬಳಿಗೆ ಕರೆತನ್ನಿ” ಎಂದನು. ಬೆನ್ಹದದನು ರಾಜನಾದ ಅಹಾಬನ ಬಳಿಗೆ ಬಂದನು. ರಾಜನಾದ ಅಹಾಬನು ಅವನನ್ನು ತನ್ನೊಡನೆ ರಥದಲ್ಲಿ ಕುಳ್ಳಿರಿಸಿಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಈ ಮಾತು ಶುಭವಚನವೆಂದು ನೆನಸಿ ಕೂಡಲೆ ಅವನ ಮಾತನ್ನೇ ಹಿಡಿದು, “ಬೆನ್ಹದದನು ನಿನ್ನ ಸಹೋದರನೇ ಹೌದು” ಅಂದರು. ಅವನು ಅವರಿಗೆ, “ಹೋಗಿ ಬೆನ್ಹದದನನ್ನು ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಲು ಅವನು ಬಂದಾಗ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು.
Kannada BSI Bible 2016
ಈಗ ಆ ಮನುಷ್ಯರು ಅವನ ಮಾತಿನಲ್ಲಿ ಏನಾದರೂ ಬಂದೀತೆಂದು ಜಾಗ್ರೆತೆ ಯಿಂದ ನೋಡಿಕೊಂಡು ಅದನ್ನು ಅವಸರದಿಂದ ಹಿಡಿದರು. ಅವರು--ನಿನ್ನ ಸಹೋದರನಾದ ಬೆನ್ಹದ ದನು ಎಂದು ಹೇಳಿದರು. ಆಗ ಅವನು--ನೀವು ಹೋಗಿ ಅವನನ್ನು ಕರೆತನ್ನಿರಿ ಅಂದನು. ಬೆನ್ಹದದನು ಅವನ ಬಳಿಗೆ ಬಂದಾಗ ಅವನು ಇವನನ್ನು ರಥದ ಲ್ಲೇರ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಈ ಮಾತು ಶುಭವಚನವೆಂದು ನೆನಸಿ ಕೂಡಲೆ ಅವನ ಮಾತನ್ನೇ ಹಿಡಿದು - ಬೆನ್ಹದದನು ನಿನ್ನ ಸಹೋದರನೇ ಹೌದು ಅಂದರು. ಅವನು ಅವರಿಗೆ - ಹೋಗಿ ಬೆನ್ಹದದನನ್ನು ಕರಕೊಂಡು ಬನ್ನಿರಿ ಎಂದು ಆಜ್ಞಾಪಿಸಲು ಅವನು ಬಂದಾಗ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು.
Kannada Bible (KNCL) BSI 2016
ಅವರು ಈ ಮಾತು ಶುಭವಚನವೆಂದು ನೆನೆಸಿ, ಕೂಡಲೆ ಅವನ ಮಾತನ್ನೇ ಅನುಮೋದಿಸಿ, “ಬೆನ್ಹದದನು ನಿಮ್ಮ ಸಹೋದರನೇ ಹೌದು,” ಎಂದರು. ಅವನು ಅವರಿಗೆ, “ಹೋಗಿ ಬೆನ್ಹದದನನ್ನು ಕರೆದುಕೊಂಡು ಬನ್ನಿ,” ಎಂದು ಆಜ್ಞಾಪಿಸಿದನು. ಅವನು ಬಂದಾಗ ಅವನನ್ನು ತನ್ನ ರಥದಲ್ಲೇ ಕುಳ್ಳಿರಿಸಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಆ ಮನುಷ್ಯರು ಈ ಮಾತನ್ನು ಶುಭಸೂಚನೆಯಾಗಿ ನೆನಸಿ, ಅವನ ಮಾತಿಗೆ ಉತ್ತರವಾಗಿ, “ನಿನ್ನ ಸಹೋದರನಾದ ಬೆನ್ಹದದನು ಇದ್ದಾನೆ,” ಎಂದು ಹೇಳಿದರು. ಆಗ ಅಹಾಬನು, “ನೀವು ಹೋಗಿ ಅವನನ್ನು ಕರೆದುಕೊಂಡು ಬನ್ನಿರಿ,” ಎಂದನು. ಬೆನ್ಹದದನು ಅವನ ಬಳಿಗೆ ಹೊರಟುಬಂದಾಗ ಅಹಾಬನು ಅವನನ್ನು ರಥದಲ್ಲಿ ಕುಳ್ಳಿರಿಸಿಕೊಂಡನು.