1 Kings 20:40 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ನಾನು ಇತರ ಕೆಲಸಗಳಲ್ಲಿ ನಿರತನಾಗಿದ್ದಾಗ, ಆ ಮನುಷ್ಯನು ಓಡಿಹೋದನು” ಎಂದು ಹೇಳಿದನು. ಇಸ್ರೇಲಿನ ರಾಜನು, “ಆ ಸೈನಿಕನು ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟ ನೀನು ನಿನ್ನನ್ನು ತಪ್ಪಿತಸ್ಥನೆಂದು ಒಪ್ಪಿಕೊಂಡಿರುವೆ. ಆದ್ದರಿಂದ, ಅದರ ಪರಿಹಾರವೂ ನಿನಗೆ ತಿಳಿದಿದೆ. ಆ ಮನುಷ್ಯನೇನು ಹೇಳಿದನೊ ಅದನ್ನು ನೀನು ಮಾಡಲೇಬೇಕು” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಕೆಲಸದಲ್ಲಿದ್ದಾಗ ಅವನು ತಪ್ಪಿಸಿಕೊಂಡು ಹೋದನು” ಎಂದು ಮೊರೆಯಿಟ್ಟನು. ಇಸ್ರಾಯೇಲರ ಅರಸನು ಇವನಿಗೆ “ನಿನಗೆ ಆ ತೀರ್ಪು ಸರಿಯಾಗಿದೆ, ತೀರ್ಮಾನಿಸಿದವನು ನೀನೇ ಅಲ್ಲವೋ?” ಎಂದು ನುಡಿದನು.
Kannada BSI Bible 2016
ಆದರೆ ನಿನ್ನ ಸೇವಕನು ಅಲ್ಲಿ ಇಲ್ಲಿ ಕೆಲಸ ಮಾಡುತ್ತಿರುವಾಗ ಅವನು ಇಲ್ಲದೆ ಹೋದನು ಅಂದನು. ಇಸ್ರಾಯೇಲಿನ ಅರ ಸನು ಅವನಿಗೆ--ನಿನ್ನ ತೀರ್ಪಿನ ಹಾಗೆಯೇ ಆಗು ವದು; ನೀನೇ ನಿರ್ಣಯಿಸಿದಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಕೆಲಸದಲ್ಲಿದ್ದಾಗ ಅವನು ತಪ್ಪಿಸಿಕೊಂಡು ಹೋದನು ಎಂದು ಮೊರೆಯಿಟ್ಟನು. ಇಸ್ರಾಯೇಲ್ಯರ ಅರಸನು ಇವನಿಗೆ - ನಿನಗೆ ಆ ತೀರ್ಪು ಸರಿಯಾಗಿದೆ; ತೀರ್ಮಾನಿಸಿದವನು ನೀನೇ ಅಲ್ಲವೋ ಎಂದು ನುಡಿದನು.
Kannada Bible (KNCL) BSI 2016
ನಾನು ಬೇರೆ ಕೆಲಸದಲ್ಲಿದ್ದಾಗ ಆ ವ್ಯಕ್ತಿ ತಪ್ಪಿಸಿಕೊಂಡು ಹೋದನು,” ಎಂದು ಮೊರೆಯಿಟ್ಟನು. ಇಸ್ರಯೇಲರ ಅರಸನು ಇವನಿಗೆ, “ನಿನಗೆ ಆ ತೀರ್ಪು ಸರಿಯಾಗಿದೆ; ತೀರ್ಮಾನಿಸಿದವನು ನೀನೇ ಅಲ್ಲವೇ?’ ಎಂದು ನುಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನಿನ್ನ ಸೇವಕನು ಇಲ್ಲಿ ಕೆಲಸ ಮಾಡುತ್ತಿರುವಾಗ ಅವನು ತಪ್ಪಿಸಿಕೊಂಡುಹೋದನು,” ಎಂದನು. ಇಸ್ರಾಯೇಲಿನ ಅರಸನು ಅವನಿಗೆ, “ನಿನ್ನ ತೀರ್ಪಿನ ಹಾಗೆಯೇ ಆಗಲಿ, ನೀನು ಸರಿಯಾಗಿ ನಿರ್ಣಯಿಸಿದಿ,” ಎಂದನು.