1 Kings 20:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಅಹಾಬನು ತನ್ನ ರಾಜ್ಯದ ಹಿರಿಯರೆಲ್ಲರ ಒಂದು ಸಭೆಯನ್ನು ಕರೆದು, “ನೋಡಿ, ಬೆನ್ಹದದನು ಕೇಡುಮಾಡಬೇಕೆಂದಿದ್ದಾನೆ. ನನ್ನ ಪತ್ನಿಯರನ್ನು, ಮಕ್ಕಳನ್ನು ಮತ್ತು ಬೆಳ್ಳಿಬಂಗಾರಗಳನ್ನು ತನಗೆ ಒಪ್ಪಿಸಬೇಕೆಂದು ಅವನು ನನ್ನನ್ನು ಮೊದಲು ಕೇಳಿದ್ದನು. ನಾನು ಅದಕ್ಕೆ ಒಪ್ಪಿಕೊಂಡಿದ್ದೆನು. ಈಗ ಅವನು ಎಲ್ಲವನ್ನೂ ತೆಗೆದುಕೊಳ್ಳಲು ಅಪೇಕ್ಷೆಪಟ್ಟಿದ್ದಾನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಇಸ್ರಾಯೇಲರ ಅರಸನು ದೇಶದ ಎಲ್ಲಾ ಹಿರಿಯರನ್ನು ಕರೆಯಿಸಿ ಅವರಿಗೆ, “ನೋಡಿದಿರಾ ಅವನು ನಮಗೆ ಕೇಡು ಬಗೆಯುತ್ತಾನೆ, ‘ನಿನ್ನ ಬೆಳ್ಳಿಬಂಗಾರವನ್ನೂ ಹೆಂಡತಿ ಮಕ್ಕಳನ್ನು ನನಗೆ ಕೊಡು’ ಎಂದು ಅವನು ಹೇಳಿ ಕಳುಹಿಸಿದಕ್ಕೆ ನಾನು ಒಪ್ಪಿದರೂ ಅವನಿಗೆ ತೃಪ್ತಿಯಾಗಲಿಲ್ಲ” ಎಂದು ಹೇಳಿದನು.
Kannada BSI Bible 2016
ಆಗ ಇಸ್ರಾಯೇಲಿನ ಅರಸನು ದೇಶದ ಹಿರಿಯರನ್ನೆಲ್ಲಾ ಕರೆಯಿಸಿ ಅವರಿಗೆಇವನು ಕೇಡನ್ನು ಹುಡುಕುತ್ತಾನೆಂದು ದಯಮಾಡಿ ತಿಳುಕೊಂಡು ನೋಡಿರಿ. ಯಾಕಂದರೆ ಅವನು ನನ್ನ ಹೆಂಡತಿಯರಿಗೋಸ್ಕರ ಮಕ್ಕಳಿಗೋಸ್ಕರವೂ ಬೆಳ್ಳಿಗೋ ಸ್ಕರವೂ ನನ್ನ ಬಂಗಾರಕ್ಕೋಸ್ಕರವೂ ನನ್ನ ಬಳಿಗೆ ಕಳುಹಿಸಿದಾಗ ನಾನು ಕೊಡುವದಿಲ್ಲವೆಂದು ಅವನಿಗೆ ಹೇಳಿದ್ದಿಲ್ಲ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಇಸ್ರಾಯೇಲ್ಯರ ಅರಸನು ದೇಶದ ಎಲ್ಲಾ ಹಿರಿಯರನ್ನು ಕರಿಸಿ ಅವರಿಗೆ - ನೋಡಿದಿರಾ, ಅವನು ನಮಗೆ ಕೇಡು ಬಗೆಯುತ್ತಾನೆ; ನಿನ್ನ ಬೆಳ್ಳಿಬಂಗಾರವನ್ನೂ ಸತಿಸುತರನ್ನೂ ನನಗೆ ಕೊಡು ಎಂದು ಅವನು ಹೇಳಿಕಳುಹಿಸಿದ್ದಕ್ಕೆ ನಾನು ಒಪ್ಪಿದರೂ ಅವನಿಗೆ ತೃಪ್ತಿಯಾಗಲಿಲ್ಲ ಎಂದು ಹೇಳಲು
Kannada Bible (KNCL) BSI 2016
ಆಗ ಇಸ್ರಯೇಲರ ಆ ಅರಸನು ನಾಡಿನ ಎಲ್ಲ ಹಿರಿಯರನ್ನು ಕರೆಸಿ ಅವರಿಗೆ, “ನೋಡಿದಿರೋ, ಅವನು ನಮಗೆಂಥ ಕೇಡು ಬಗೆಯುತ್ತಾನೆ; ‘ನಿನ್ನ ಬೆಳ್ಳಿಬಂಗಾರವನ್ನೂ ಸತಿಸುತರನ್ನೂ ನನಗೆ ಕೊಡು’ ಎಂದು ಹೇಳಿಕಳುಹಿಸಿದ್ದಕ್ಕೆ ನಾನು ಒಪ್ಪಿದರೂ ಅವನಿಗೆ ತೃಪ್ತಿಯಾಗಲಿಲ್ಲ,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಇಸ್ರಾಯೇಲಿನ ಅರಸನು ದೇಶದ ಹಿರಿಯರನ್ನೆಲ್ಲಾ ಕರೆಯಿಸಿ ಅವರಿಗೆ, “ಇವನು ಎಂಥಾ ಕೇಡನ್ನು ಹುಡುಕುತ್ತಾನೆ, ಎಂದು ನೋಡಿರಿ. ಏಕೆಂದರೆ ಅವನು ನನ್ನ ಹೆಂಡತಿಯರಿಗೋಸ್ಕರವೂ, ನನ್ನ ಮಕ್ಕಳಿಗೋಸ್ಕರವೂ, ನನ್ನ ಬೆಳ್ಳಿಗೋಸ್ಕರವೂ, ನನ್ನ ಬಂಗಾರಕ್ಕೋಸ್ಕರವೂ ನನ್ನ ಬಳಿಗೆ ಕಳುಹಿಸಿದಾಗ, ನಾನು ಕೊಡುವುದಿಲ್ಲವೆಂದು ಅವನಿಗೆ ಹೇಳಲಿಲ್ಲ,” ಎಂದನು.