1 Kings 20:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಹಾಬನು ಬೆನ್ಹದದನ ಸಂದೇಶಕರಿಗೆ, “ನನ್ನ ಒಡೆಯನಾದ ರಾಜನಿಗೆ ಇದನ್ನು ತಿಳಿಸಿರಿ: ‘ನೀನು ಮೊದಲು ಹೇಳಿದ್ದನ್ನು ನಾನು ಮಾಡುತ್ತೇನೆ. ಆದರೆ ನಿನ್ನ ಎರಡನೆಯ ಆಜ್ಞೆಯನ್ನು ನೆರವೇರಿಸಲು ನನ್ನಿಂದ ಸಾಧ್ಯವಿಲ್ಲ” ಎಂದು ಹೇಳಿದನು. ರಾಜನಾದ ಬೆನ್ಹದದನ ಜನರು ಈ ಸಂದೇಶವನ್ನು ರಾಜನಿಗೆ ತಿಳಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದುದರಿಂದ ಅವನು ಬಂದಂಥ ದೂತರ ಮುಖಾಂತರವಾಗಿ ಬೆನ್ಹದದನಿಗೆ, “ನನ್ನ ಒಡೆಯನೇ, ಅರಸನೇ, ನಾನು ನಿನ್ನ ಮೊದಲನೆಯ ಮಾತಿಗೆ ಒಪ್ಪಿ ಅದರಂತೆ ಮಾಡಲು ಸಿದ್ಧನಾಗಿರುತ್ತೇನೆ. ಆದರೆ ಎರಡನೆಯ ಮಾತಿಗೆ ಒಪ್ಪಲಾರೆನು” ಎಂದು ಹೇಳಿ ಕಳುಹಿಸಿದನು. ದೂತರು ಬಂದು ಈ ಮಾತನ್ನು ಬೆನ್ಹದದನಿಗೆ ತಿಳಿಸಿದರು.
Kannada BSI Bible 2016
ನೀವು ಅರಸನಾದ ನನ್ನ ಒಡೆಯನಿಗೆ ಹೇಳಬೇಕಾದದ್ದೇನಂದರೆ, ನೀನು ಮೊದಲು ಹೇಳಿದ ಸಮಸ್ತವನ್ನೂ ಮಾಡುವೆನು; ಆದರೆ ಈ ಕಾರ್ಯವನ್ನು ನಾನು ಮಾಡಕೂಡದು ಎಂದು ಹೇಳಿರಿ ಅಂದನು. ದೂತರು ಹೋಗಿ ಈ ಮಾತನ್ನು ಅವನಿಗೆ ಹೇಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದದರಿಂದ ಅವನು ಬಂದಂಥ ದೂತರ ಮುಖಾಂತರವಾಗಿ ಬೆನ್ಹದದನಿಗೆ - ನನ್ನ ಒಡೆಯನೇ, ಅರಸನೇ, ನಾನು ನಿನ್ನ ಮೊದಲನೆಯ ಮಾತಿಗೆ ಒಪ್ಪಿ ಅದರಂತೆ ಮಾಡಲು ಸಿದ್ಧನಾಗಿರುತ್ತೇನೆ; ಆದರೆ ಎರಡನೆಯ ಮಾತಿಗೆ ಒಪ್ಪಲಾರೆನು ಎಂದು ಹೇಳಿ ಕಳುಹಿಸಿದನು.
Kannada Bible (KNCL) BSI 2016
ಆದುದರಿಂದ ಅವನು ಬಂದಂಥ ದೂತರ ಮುಖಾಂತರ ಬೆನ್ಹದದನಿಗೆ, “ನನ್ನ ಒಡೆಯರೇ, ಅರಸರೇ, ನಾನು ನಿಮ್ಮ ಮೊದಲನೆಯ ಮಾತಿಗೆ ಒಪ್ಪಿ ಅದರಂತೆ ಮಾಡಲು ಸಿದ್ಧನಾಗಿರುತ್ತೇನೆ; ಆದರೆ ಎರಡನೆಯ ಮಾತಿಗೆ ಒಪ್ಪಲಾರೆ,” ಎಂದು ಹೇಳಿಕಳುಹಿಸಿದನು ದೂತರು ಬಂದು ಈ ಮಾತುಗಳನ್ನು ಬೆನ್ಹದದನಿಗೆ ತಿಳಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಅವನು ಬೆನ್ಹದದನ ದೂತರಿಗೆ, “ನೀವು ಅರಸನಾದ ನನ್ನ ಒಡೆಯನಿಗೆ ಹೇಳಬೇಕಾದದ್ದೇನೆಂದರೆ, ‘ನೀನು ಮೊದಲು ಹೇಳಿದ ಸಮಸ್ತವನ್ನೂ ಮಾಡುವೆನು. ಆದರೆ ಈ ಸಾರಿ ಹೇಳಿದ ಕಾರ್ಯವನ್ನು ನಾನು ಮಾಡಲಾರೆ,’ ಎಂದು ಹೇಳಿರಿ,” ಎಂದನು. ದೂತರು ಹೋಗಿ ಈ ಮಾತುಗಳನ್ನು ಬೆನ್ಹದದನಿಗೆ ಹೇಳಿದರು.