1 Kings 21:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈಜೆಬೆಲಳು, “ನೀನು ಇಸ್ರೇಲಿಗೆಲ್ಲ ರಾಜ! ನಿನ್ನ ಹಾಸಿಗೆಯಿಂದ ಎದ್ದು ಬಾ. ನೀನು ಸ್ವಲ್ಪ ಊಟಮಾಡಿ, ಸಂತೋಷದಿಂದಿರು. ನಾನು ನಿನಗೆ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ, “ಇಸ್ರಾಯೇಲರ ಅರಸನಾದ ನೀನು ಹೀಗೆ ಮಾಡುವುದು ಸರಿಯೇ? ಎದ್ದು ಊಟ ಮಾಡಿ ಸಂತೋಷದಿಂದಿರು. ನಾನು ನಿನಗೆ ಇಜ್ರೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.
Kannada BSI Bible 2016
ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ--ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೊ? ಎದ್ದು ರೊಟ್ಟಿತಿನ್ನು; ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೇಲ್ಯನಾದ ನಾಬೋತನ ದ್ರಾಕ್ಷೇ ತೋಟವನ್ನು ನಿನಗೆ ಕೊಡುವೆನು ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ - ನೀನು ಇಸ್ರಾಯೇಲ್ಯರ ಅರಸನೋ; ಎದ್ದು ಊಟಮಾಡಿ ಸಂತೋಷದಿಂದಿರು; ನಾನು ನಿನಗೆ ಇಜ್ರೇಲಿನವನಾದ ನಾಬೋತನ ದ್ರಾಕ್ಷೇತೋಟವನ್ನು ಕೊಡುತ್ತೇನೆ ಎಂದು ನುಡಿದು
Kannada Bible (KNCL) BSI 2016
ಆಗ ಅವನ ಹೆಂಡತಿ ಈಜೆಬೆಲಳು, “ಇಸ್ರಯೇಲರ ಅರಸರಾದ ನೀವು ಹೀಗೆ ವರ್ತಿಸುವುದೇ! ಎದ್ದು ಊಟಮಾಡಿ, ಸಂತೋಷದಿಂದಿರಿ; ನಾನು ನಿಮಗೆ ಜೆಸ್ರೀಲಿನವನಾದ ನಾಬೋತನ ದ್ರಾಕ್ಷೀತೋಟವನ್ನು ಕೊಡುತ್ತೇನೆ,” ಎಂದು ನುಡಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನ ಹೆಂಡತಿ ಈಜೆಬೆಲಳು ಅವನಿಗೆ, “ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೋ? ಎದ್ದು ಊಟಮಾಡು. ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೆಯೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ನಿನಗೆ ಕೊಡಿಸುತ್ತೇನೆ,” ಎಂದಳು.