1 Kings 22:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೀಕಾಯೆಹು ಗಟ್ಟಿಯಾದ ಧ್ವನಿಯಲ್ಲಿ, “ನಾನು ಏನು ಹೇಳುತ್ತೇನೆಂಬುದನ್ನು ಜನರೆಲ್ಲರೂ ಕೇಳಿರಿ! ರಾಜನಾದ ಅಹಾಬನೇ, ನೀನು ಈ ಹೋರಾಟದಿಂದ ಜೀವಸಹಿತ ಮನೆಗೆ ಬಂದರೆ, ಯೆಹೋವನು ನನ್ನ ಮೂಲಕ ಮಾತನಾಡಿಲ್ಲ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತವಾಗಿ ಬರುವುದಾದರೆ ನಾನು ನುಡಿದದ್ದು ಯೆಹೋವನ ಮಾತಲ್ಲವೆಂದು ತಿಳಿದುಕೋ” ಎಂದು ಹೇಳಿ “ಎಲ್ಲಾ ಜನರೇ, ಇದನ್ನು ಕೇಳಿರಿ” ಎಂದು ಕೂಗಿದನು.
Kannada BSI Bible 2016
ಅದಕ್ಕೆ ವಿಾಕಾಯೆಹುವು ನೀನು ಸಮಾ ಧಾನದಿಂದ ತಿರಿಗಿ ನಿಜವಾಗಿ ಬಂದರೆ ಕರ್ತನು ನನ್ನ ಮುಖಾಂತರ ಮಾತನಾಡಿದ್ದಿಲ್ಲವೆಂದು ಜನರೇ, ನೀವೆ ಲ್ಲರೂ ಕೇಳಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೀಕಾಯೆಹುವು ಅರಸನಿಗೆ - ನೀನು ಸುರಕ್ಷಿತನಾಗಿ ಬರುವದಾದರೆ ನಾನು ನುಡಿದದ್ದು ಯೆಹೋವನ ಮಾತಲ್ಲವೆಂದು ತಿಳಿದುಕೋ ಎಂದು ಹೇಳಿ - ಎಲ್ಲಾ ಜನರೇ, ಇದನ್ನು ಕೇಳಿರಿ ಎಂದು ಕೂಗಿದನು.
Kannada Bible (KNCL) BSI 2016
ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತನಾಗಿ ಬರುವುದಾದರೆ ನಾನು ನುಡಿದದ್ದು ಸರ್ವೇಶ್ವರನ ಮಾತಲ್ಲವೆಂದು ತಿಳಿದುಕೋ,” ಎಂದು ಹೇಳಿ, “ಮಹಾಜನರೇ, ನನ್ನ ಮಾತನ್ನು ಗಮನದಲ್ಲಿಡಿ,” ಎಂದು ಕೂಗಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಮೀಕಾಯನು, “ನೀನು ಸಮಾಧಾನದಿಂದ ನಿಜವಾಗಿ ಬಂದರೆ, ಯೆಹೋವ ದೇವರು ನನ್ನ ಮುಖಾಂತರ ಮಾತನಾಡಿಲ್ಲ, ಎಂದು ಹೇಳಿ; ಜನರೇ ನೀವೆಲ್ಲರೂ ನನ್ನ ಮಾತನ್ನು ಗಮನದಲ್ಲಿಡಿರಿ!” ಎಂದು ಕೂಗಿ ಹೇಳಿದನು.