1 Kings 22:52 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಹಜ್ಯನು ಯೆಹೋವನ ವಿರುದ್ಧ ಪಾಪವನ್ನು ಮಾಡಿದನು. ಅವನು ತನ್ನ ತಂದೆಯಾದ ಅಹಾಬ, ತಾಯಿಯಾದ ಈಜೆಬೆಲ ಮತ್ತು ನೆಬಾಟನ ಮಗನಾದ ಯಾರೊಬ್ಬಾಮ ಮಾಡಿದಂತಹ ಕಾರ್ಯಗಳನ್ನೇ ಮಾಡಿದನು. ಈ ಆಡಳಿತಗಾರರೆಲ್ಲ ಇಸ್ರೇಲಿನ ಜನರನ್ನು ಮತ್ತಷ್ಟು ಪಾಪಕ್ಕೆ ನಡೆಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿ ನೆಬಾಟನ ಮಗನಾದ ಯಾರೊಬ್ಬಾಮನ ಮತ್ತು ತನ್ನ ತಂದೆತಾಯಿಗಳ ಮಾರ್ಗದಲ್ಲಿ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
Kannada BSI Bible 2016
ತನ್ನ ತಂದೆಯ ಮಾರ್ಗದಲ್ಲಿಯೂ ತನ್ನ ತಾಯಿಯ ಮಾರ್ಗ ದಲ್ಲಿಯೂ ಇಸ್ರಾಯೆಲ್ಯರನ್ನು ಪಾಪಮಾಡಲು ಪ್ರೇರೇ ಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನಮಾರ್ಗದಲ್ಲಿಯೂ ನಡೆದನು.ಅವನು ಬಾಳನನ್ನು ಸೇವಿಸಿ ಅದಕ್ಕೆ ಅಡ್ಡಬಿದ್ದು ತನ್ನ ತಂದೆಯು ಮಾಡಿದ ಎಲ್ಲಾದರ ಪ್ರಕಾರವೇ ಇಸ್ರಾಯೇಲಿನ ದೇವರಾದ ಕರ್ತನಿಗೆ ಕೋಪವನ್ನು ಎಬ್ಬಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮತ್ತು ತನ್ನ ತಂದೆತಾಯಿಗಳ ಮಾರ್ಗದಲ್ಲಿ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
Kannada Bible (KNCL) BSI 2016
ಇವನು ಇಸ್ರಯೇಲರನ್ನು ಪಾಪಕ್ಕೆ ಪ್ರಚೋದಿಸಿ ನೆಬಾಟನ ಮಗ ಯಾರೊಬ್ಬಾಮನ ಮತ್ತು ತನ್ನ ತಂದೆತಾಯಿಗಳ ಮಾರ್ಗದಲ್ಲಿ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ತನ್ನ ತಂದೆಯ ಮಾರ್ಗದಲ್ಲಿಯೂ, ತನ್ನ ತಾಯಿಯ ಮಾರ್ಗದಲ್ಲಿಯೂ ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಮಾರ್ಗದಲ್ಲಿಯೂ ನಡೆದನು.