1 Kings 3:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಸೊಲೊಮೋನನು, “ಮಗುವನ್ನು ಕೊಲ್ಲಬೇಡಿ! ಅದನ್ನು ಮೊದಲನೆಯ ಸ್ತ್ರೀಗೆ ಕೊಡಿ. ಅವಳೇ ನಿಜವಾದ ತಾಯಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೂಡಲೇ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿರಿ. ಆ ಸ್ತ್ರೀಗೆ ಕೊಡಿರಿ. ಅವಳೇ ಅದರ ತಾಯಿ” ಎಂದು ಆಜ್ಞಾಪಿಸಿದನು.
Kannada BSI Bible 2016
ಆಗ ಅರಸನು ಪ್ರತ್ಯುತ್ತರವಾಗಿಬದುಕಿರುವ ಕೂಸನ್ನು ಇವಳಿಗೆ ಕೊಡಿರಿ; ಕೊಲ್ಲ ಬೇಡಿರಿ; ಇವಳೇ ಅದರ ತಾಯಿ ಅಂದನು.ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇ ಲ್ಯರು ಕೇಳಿ ಅರಸನಿಗೆ ಭಯಪಟ್ಟರು; ಯಾಕಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ನೋಡಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೂಡಲೆ ಅರಸನು - ಬದುಕಿರುವ ಕೂಸನ್ನು ಕೊಲ್ಲಬೇಡಿರಿ, ಆ ಸ್ತ್ರೀಗೆ ಕೊಡಿರಿ; ಅವಳೇ ಅದರ ತಾಯಿ ಎಂದು ಆಜ್ಞಾಪಿಸಿದನು.
Kannada Bible (KNCL) BSI 2016
ಕೂಡಲೆ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿ, ಅದನ್ನು ಆ ಸ್ತ್ರೀಗೆ ಕೊಡಿ; ಅವಳೇ ಅದರ ತಾಯಿ,” ಎಂದು ಆಜ್ಞಾಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಸನು ಉತ್ತರವಾಗಿ, “ಬದುಕಿರುವ ಕೂಸನ್ನು ಮೊದಲನೆಯವಳಿಗೆ ಕೊಡಿರಿ, ಕೊಲ್ಲಬೇಡಿರಿ, ಇವಳೇ ಅದರ ತಾಯಿ,” ಎಂದನು.