1 Kings 4:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೊಲೊಮೋನನು ಪ್ರಕೃತಿಯ ಬಗ್ಗೆಯೂ ಹೆಚ್ಚಾಗಿ ತಿಳಿದುಕೊಂಡನು. ಸೊಲೊಮೋನನು ಲೆಬನೋನಿನ ದೇವದಾರು ವೃಕ್ಷಗಳಿಂದ ಮೊದಲುಗೊಂಡು ಗೋಡೆಗಳಲ್ಲಿ ಬೆಳೆಯುವ ಗಿಡಗಳವರೆಗೆ, ವಿವಿಧ ರೀತಿಯ ಸಸ್ಯಗಳ ಬಗ್ಗೆ ಪ್ರಸ್ತಾಪಿಸಿದನು. ರಾಜನಾದ ಸೊಲೊಮೋನನು ಪ್ರಾಣಿಗಳ, ಪಕ್ಷಿಗಳ ಮತ್ತು ಹರಿದಾಡುವ ಜಂತುಗಳ ಬಗ್ಗೆಯೂ ಪ್ರಸ್ತಾಪಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಲೆಬನೋನಿನ ದೇವದಾರು ವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನೂ, ಎಲ್ಲಾ ಪಶುಪಕ್ಷಿ, ಜಲಚರಗಳು, ಕ್ರಿಮಿಕೀಟಗಳನ್ನೂ ಕುರಿತು ಪ್ರಸ್ತಾಪಿಸ ಬಲ್ಲವನಾಗಿದ್ದನು.
Kannada BSI Bible 2016
ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನ ವರೆಗೂ ಹೇಳಿದನು. ಇದಲ್ಲದೆ ಮೃಗ ಪಕ್ಷಿ ಕ್ರಿಮಿ ಮತ್ತು ವಿಾನುಗಳನ್ನು ಕುರಿತೂ ಹೇಳಿದನು.ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಲೆಬನೋನಿನ ದೇವದಾರುವೃಕ್ಷ ಮೊದಲುಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನೂ ಎಲ್ಲಾ ಪಶುಪಕ್ಷಿಜಲಜಂತು ಕ್ರಿವಿುಕೀಟಗಳನ್ನೂ ಕುರಿತು ಪ್ರಸ್ತಾಪಿಸಿದನು.
Kannada Bible (KNCL) BSI 2016
ಅವನು, ಲೆಬನೋನಿನ ದೇವದಾರುವೃಕ್ಷ ಮೊದಲ್ಗೊಂಡು ಗೋಡೆಯಲ್ಲಿ ಬೆಳೆಯುವ ಹಿಸ್ಸೋಪ್ ಗಿಡದವರೆಗಿರುವ ಎಲ್ಲಾ ವನಸ್ಪತಿಗಳನ್ನು ಕುರಿತು, ಎಲ್ಲಾ ಪಶುಪಕ್ಷಿ, ಜಲಜಂತು, ಕ್ರಿಮಿಕೀಟಗಳನ್ನು ಕುರಿತು ಪ್ರಸ್ತಾಪಿಸಬಲ್ಲವನಾಗಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನವರೆಗೂ ಹೇಳಿದನು. ಇದಲ್ಲದೆ ಮೃಗಗಳನ್ನು ಕುರಿತೂ, ಪಕ್ಷಿಗಳನ್ನು ಕುರಿತೂ, ಕ್ರಿಮಿಗಳನ್ನು ಕುರಿತೂ, ಮೀನುಗಳನ್ನು ಕುರಿತೂ ಪ್ರಸ್ತಾಪಿಸಬಲ್ಲವನಾಗಿದ್ದನು.