1 Kings 5:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ತಾನು ವಾಗ್ದಾನ ಮಾಡಿದ್ದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಹೀರಾಮನ ಮತ್ತು ಸೊಲೊಮೋನನ ನಡುವೆ ಸಮಾಧಾನವಿತ್ತು. ಈ ಇಬ್ಬರು ರಾಜರುಗಳು ತಮ್ಮತಮ್ಮಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ತಾನು ವಾಗ್ದಾನ ಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಸೊಲೊಮೋನನಿಗೂ ಹೀರಾಮನಿಗೂ ಒಳ್ಳೆಯ ಸಂಬಂಧವಿತ್ತು, ಅವರಿಬ್ಬರು ಪರಸ್ಪರವಾಗಿ ಒಡಂಬಡಿಕೆ ಮಾಡಿಕೊಂಡಿದ್ದರು.
Kannada BSI Bible 2016
ಇದಲ್ಲದೆ ಕರ್ತನು ಸೊಲೊಮೋನನಿಗೆ ವಾಗ್ದಾನಮಾಡಿದಂತೆ ಜ್ಞಾನವನ್ನು ಕೊಟ್ಟನು. ಹೀರಾಮನಿಗೂ ಸೊಲೊಮೋನನಿಗೂ ಸಮಾಧಾನ ಉಂಟಾಗಿತ್ತು. ಅವರಿಬ್ಬರೂ ಒಡಂಬಡಿಕೆ ಯನ್ನು ಮಾಡಿಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ತಾನು ವಾಗ್ದಾನಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಸೊಲೊಮೋನನಿಗೂ ಹೀರಾಮನಿಗೂ ಸಮಾಧಾನವಿತ್ತು; ಅವರು ಒಡಂಬಡಿಕೆ ಮಾಡಿಕೊಂಡರು.
Kannada Bible (KNCL) BSI 2016
ಸರ್ವೇಶ್ವರ ವಾಗ್ದಾನಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದ್ದರು. ಸೊಲೊಮೋನನಿಗೂ ಹೀರಾಮನಿಗೂ ಸಮಾಧಾನವಿತ್ತು; ಅವರು ಒಂದು ಒಪ್ಪಂದ ಮಾಡಿಕೊಂಡಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಯೆಹೋವ ದೇವರು ಸೊಲೊಮೋನನಿಗೆ ವಾಗ್ದಾನ ಮಾಡಿದಂತೆ ಜ್ಞಾನವನ್ನು ಕೊಟ್ಟರು. ಹೀರಾಮನಿಗೂ, ಸೊಲೊಮೋನನಿಗೂ ಸಮಾಧಾನ ಉಂಟಾಗಿತ್ತು. ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.