1 Kings 5:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನನ್ನ ತಂದೆಯಾದ ದಾವೀದನು ತನ್ನ ಸುತ್ತಮುತ್ತಲಿನವರೊಂದಿಗೆ ಅನೇಕ ಯುದ್ಧಗಳನ್ನು ಮಾಡಬೇಕಾಯಿತು, ಆದ್ದರಿಂದ ಅವನು ತನ್ನ ದೇವರಾದ ಯೆಹೋವನ ಗೌರವಕ್ಕಾಗಿ ಒಂದು ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ತನ್ನ ಎಲ್ಲಾ ಶತ್ರುಗಳನ್ನು ಸೋಲಿಸಲು ಯೆಹೋವನು ಅವಕಾಶ ಕೊಡುವ ತನಕ ರಾಜನಾದ ದಾವೀದನು ಕಾಯುತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಯೆಹೋವನ ಅನುಗ್ರಹದಿಂದ ನಮ್ಮ ತಂದೆಯಾದ ದಾವೀದನಿಗೆ ಎಲ್ಲಾ ಶತ್ರುಗಳು ವಶವಾಗುವವರೆಗೆ ಅವನು ತನ್ನ ಸುತ್ತಲೂ ಯುದ್ಧಗಳನ್ನು ನಡೆಸಬೇಕಾಯಿತು. ಆದುದರಿಂದ ಅವನು ತನ್ನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದನೆಂದು ನೀನು ಬಲ್ಲೇ.
Kannada BSI Bible 2016
ನನ್ನ ತಂದೆಯಾದ ದಾವೀದನು ತನ್ನ ದೇವರಾದ ಕರ್ತನ ನಾಮಕ್ಕೆ ಮನೆಯನ್ನು ಕಟ್ಟಿಸಲಾರದೆ ಇದ್ದನೆಂದು ನೀನು ಬಲ್ಲೆ. ಕರ್ತನು ಅವನ ಶತ್ರುಗಳನ್ನು ಅವನ ಪಾದದ ಕೆಳಗೆ ಹಾಕುವ ವರೆಗೂ ಅವನ ಸುತ್ತಲಿರುವ ಸಮಸ್ತ ದಿಕ್ಕುಗಳಲ್ಲಿ ಯುದ್ಧ ಉಂಟಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ಅನುಗ್ರಹದಿಂದ ತಮ್ಮ ತಂದೆಯಾದ ದಾವೀದನಿಗೆ ಎಲ್ಲಾ ಶತ್ರುಗಳು ವಶವಾಗುವವರೆಗೆ ಅವನು ಸುತ್ತಲೂ ಯುದ್ಧಗಳನ್ನು ನಡಿಸಬೇಕಾಗಿದ್ದದರಿಂದ ತನ್ನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದನೆಂದು ನೀನು ಬಲ್ಲೆ.
Kannada Bible (KNCL) BSI 2016
“ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ನಮ್ಮ ತಂದೆ ದಾವೀದನಿಗೆ ಎಲ್ಲಾ ಶತ್ರುಗಳು ವಶವಾದರು. ಅಲ್ಲಿಯವರೆಗೆ ಅವರು ಸುತ್ತಲೂ ಯುದ್ಧಗಳನ್ನು ನಡೆಸಬೇಕಾಗಿತ್ತು. ಆದ್ದರಿಂದ ತಮ್ಮ ದೇವರಾದ ಸರ್ವೇಶ್ವರನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದರು. ಇದು ನಿಮಗೆ ತಿಳಿದ ವಿಷಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನನ್ನ ತಂದೆ ದಾವೀದನು ತನ್ನ ದೇವರಾದ ಯೆಹೋವ ದೇವರ ನಾಮಕ್ಕೆ ಆಲಯವನ್ನು ಕಟ್ಟಿಸಲಾರದೆ ಇದ್ದನೆಂದು ನೀನು ಬಲ್ಲೆ. ಏಕೆಂದರೆ ಯೆಹೋವ ದೇವರು ಅವನ ಶತ್ರುಗಳನ್ನು ಅವನ ಪಾದದ ಕೆಳಗೆ ಹಾಕುವವರೆಗೂ, ಅವನ ಸುತ್ತಲಿರುವ ಸಮಸ್ತ ದಿಕ್ಕುಗಳಲ್ಲಿ ಯುದ್ಧ ಉಂಟಾಯಿತು.