1 Kings 7:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ತೊಟ್ಟಿಯು ಹನ್ನೆರಡು ಹಿತ್ತಾಳೆಯ ಹೋರಿಗಳ ಬೆನ್ನಿನ ಮೇಲಿತ್ತು. ಈ ಹನ್ನೆರಡು ಹೋರಿಗಳೂ ತೊಟ್ಟಿಗೆ ದೂರವಾಗಿದ್ದ ಹೊರಭಾಗವನ್ನು ನೋಡುತ್ತಿರುವಂತೆ ಕಾಣುತ್ತಿದ್ದವು. ಮೂರು ಉತ್ತರದ ಕಡೆಗೂ ಮೂರು ಪೂರ್ವದ ಕಡೆಗೂ ಮೂರು ದಕ್ಷಿಣದ ಕಡೆಗೂ ಮೂರು ಪಶ್ಚಿಮದ ಕಡೆಗೂ ನೋಡುತ್ತಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ ಮತ್ತು ಮೂರು ಪೂರ್ವದಿಕ್ಕಿಗೂ ಮುಖಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗವು ಒಳಗಡೆ ಇತ್ತು.
Kannada BSI Bible 2016
ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡುತ್ತಾ ಇದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು; ಅವುಗಳ ಹಿಂಭಾಗಗಳೆಲ್ಲಾ ಒಳಪಾರ್ಶ್ವದಲ್ಲಿ ಇದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರದಿಕ್ಕಿಗೂ ಮೂರು ಪಶ್ಚಿಮದಿಕ್ಕಿಗೂ ಮೂರು ದಕ್ಷಿಣದಿಕ್ಕಿಗೂ ಮೂರು ಪೂರ್ವದಿಕ್ಕಿಗೂ ಮುಖಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲೆ ಇತ್ತು; ಅವುಗಳ ಹಿಂಭಾಗವು ಒಳಗಡೆ ಇತ್ತು.
Kannada Bible (KNCL) BSI 2016
ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮ ದಿಕ್ಕಿಗೂ ಮೂರು ದಕ್ಷಿಣ ದಿಕ್ಕಿಗೂ ಮೂರು ಪೂರ್ವ ದಿಕ್ಕಿಗೂ ಮುಖಮಾಡಿಕೊಂಡಿದ್ದವು. ಕಡಲು ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗ ಒಳಗಡೆ ಇತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.