1 Kings 7:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಂಕಣದ ಮತ್ತು ಚೌಕಟ್ಟಿನ ಮೇಲೆ ಹಿತ್ತಾಳೆಯ ಸಿಂಹಗಳು, ಹೋರಿಗಳು ಮತ್ತು ಕೆರೂಬಿಗಳಿದ್ದವು. ಸಿಂಹಗಳ, ಹೋರಿಗಳ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹೂವಿನಾಕಾರದಲ್ಲಿ ಹಿತ್ತಾಳೆಯ ಮೇಲೆ ಕೆತ್ತಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ ಮತ್ತು ಕೆರೂಬಿ ಇವುಗಳ ಚಿತ್ರಗಳಿದ್ದವು. ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು. ಸಿಂಹ, ಹೋರಿ ಇವುಗಳ ಮೇಲೂ ಕೆಳಗೂ ತೋರಣ ಚಿತ್ರಗಳಿದ್ದವು.
Kannada BSI Bible 2016
ಹಲಿಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ ಎತ್ತುಗಳೂ ಕೆರೂಬಿಗಳೂ ಇದ್ದವು. ಹಲಿಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು; ಸಿಂಹಗಳಿಗೂ ಎತ್ತುಗಳಿಗೂ ಕೆಳಭಾಗದಲ್ಲಿ ಕೆರೂಬಿಗಳ ಕೆಲಸಗಳು ಅದರ ಸಂಗಡ ಇದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ, ಕೆರೂಬಿ ಇವುಗಳ ಚಿತ್ರಗಳಿದ್ದವು; ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು; ಸಿಂಹ, ಹೋರಿ ಇವುಗಳ ಮೇಲೂ ಕೆಳಗೂ ತೋರಣಚಿತ್ರಗಳಿದ್ದವು.
Kannada Bible (KNCL) BSI 2016
ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ, ಕೆರೂಬಿ, ಇವುಗಳ ಚಿತ್ರಗಳಿದ್ದವು; ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು; ಸಿಂಹ, ಹೋರಿ, ಇವುಗಳ ಮೇಲೂ ಕೆಳಗೂ ತೋರಣಚಿತ್ರಗಳಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಲಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ, ಎತ್ತುಗಳೂ, ಕೆರೂಬಿಗಳೂ ಇದ್ದವು. ಹಲಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು. ಸಿಂಹಗಳಿಗೂ, ಎತ್ತುಗಳಿಗೂ ಕೆಳಭಾಗದಲ್ಲಿ ತೋರಣಗಳು ಅದರ ಸಂಗಡ ಇದ್ದವು.