1 Kings 7:31 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಪಾತ್ರೆಯ ಮೇಲೆ ಒಂದು ಚೌಕಟ್ಟಿತ್ತು. ಅದು ಪಾತ್ರೆಯ ಮೇಲೆ ಹದಿನೆಂಟು ಇಂಚು ಎತ್ತರವಾಗಿತ್ತು. ಆ ಪಾತ್ರೆಯ ಬಾಯಿಯು ಇಪ್ಪತ್ತೇಳು ಇಂಚು ವ್ಯಾಸದೊಂದಿಗೆ ವೃತ್ತಾಕಾರವಾಗಿತ್ತು. ಆ ಚೌಕಟ್ಟಿನ ಹಿತ್ತಾಳೆಯ ಮೇಲೆ ಚಿತ್ರ ವಿನ್ಯಾಸಗಳನ್ನು ಬಿಡಿಸಲಾಗಿತ್ತು. ಈ ಚೌಕಟ್ಟು ವೃತ್ತಾಕಾರವಾಗಿರದೆ ಚೌಕಾಕಾರವಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗಂಗಾಳವನ್ನು ಇಡುವುದಕ್ಕೋಸ್ಕರ ಪೀಠದ ಮೇಲಣ ಭಾಗದಲ್ಲಿ ಒಂದು ಅಥವಾ ಒಂದುವರೆ ಮೊಳ ಎತ್ತರವಾದ ಬಾಯಿತ್ತು. ಚಕ್ರಾಕಾರವಾಗಿರುವ ಈ ಬಾಯಿಯು ಒಂದುವರೆ ಮೊಳ ಅಗಲವಾಗಿತ್ತು. ಇದರ ಮೇಲೆಯೂ ಚಿತ್ರಗಳಿದ್ದವು. ಇದಕ್ಕೆ ಆಧಾರವಾದ ಅಡ್ಡಪಟ್ಟಿಗಳು ಚಕ್ರಾಕಾರವಾಗಿರದೆ ಚೌಕಾಕಾರವಾಗಿದ್ದವು.
Kannada BSI Bible 2016
ಅಂಚಿಗೆ ಒಳಗಾದ ಅದರ ಬಾಯಿಯ ಮೇಲೆ ಒಂದು ಮೊಳ ಉದ್ದವಾಗಿತ್ತು. ಅದರ ಬಾಯಿ ದುಂಡಾಗಿ ಒಂದೂವರೆ ಮೊಳವಾಗಿತ್ತು; ಅದರ ಬಾಯಿಯ ಮೇಲೆ ಚಿತ್ರ ಗಳಿದ್ದವು; ಅದರ ಚಿತ್ರಗಳು ದುಂಡಾಗಿರದೆ ಚೌಕ ವಾಗಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗಂಗಾಳವನ್ನು ಇಡುವದಕ್ಕೋಸ್ಕರ ಪೀಠದ ಮೇಲಿನ ಭಾಗದಲ್ಲಿ ಒಂದು ಅಥವಾ ಒಂದುವರೆ ಮೊಳ ಎತ್ತರವಾದ ಬಾಯಿತ್ತು. ಚಕ್ರಾಕಾರವಾಗಿರುವ ಈ ಬಾಯಿಯು ಒಂದುವರೆ ಮೊಳ ಅಗಲವಾಗಿತ್ತು. ಇದರ ಮೇಲೆಯೂ ಚಿತ್ರಗಳಿದ್ದವು. ಇದಕ್ಕೆ ಆಧಾರವಾದ ಅಡ್ಡಪಟ್ಟಿಗಳು ಚಕ್ರಾಕಾರವಾಗಿರದೆ ಚತುಷ್ಕೋಣದವುಗಳಾಗಿದ್ದವು.
Kannada Bible (KNCL) BSI 2016
ಈ ಬಾನೆಯನ್ನು ಇಡುವುದಕ್ಕಾಗಿ ಪೀಠದ ಮೇಲಿನ ಭಾಗದಲ್ಲಿ ಒಂದು ಅಥವಾ ಒಂದುವರೆ ಮೊಳ ಎತ್ತರವಾದ ಬಾಯಿ ಇತ್ತು. ಚಕ್ರಾಕಾರವಾಗಿದ್ದ ಈ ಬಾಯಿಯು ಒಂದೂವರೆ ಮೊಳ ಅಗಲವಾಗಿತ್ತು. ಇದರ ಮೇಲೆಯೂ ಚಿತ್ರಗಳಿದ್ದವು. ಇದಕ್ಕೆ ಆಧಾರವಾದ ಅಡ್ಡಪಟ್ಟಿಗಳು ಚಕ್ರಾಕಾರವಾಗಿರದೆ ಚತುಷ್ಕೋನದವುಗಳಾಗಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಂಚಿಗೆ ಒಳಗಾದ ಅದರ ಬಾಯಿ ಮೇಲೆ ಒಂದು ಮೊಳ ಉದ್ದವಾಗಿತ್ತು. ಚಕ್ರಾಕಾರವಾಗಿದ್ದ ಈ ಬಾಯಿ ಒಂದೂವರೆ ಮೊಳ ಅಗಲವಾಗಿತ್ತು. ಅದರ ಬಾಯಿಯ ಮೇಲೆ ಚಿತ್ರಗಳಿದ್ದವು. ಅದರ ಚಿತ್ರಗಳು ದುಂಡಾಗಿರದೆ ಚೌಕವಾಗಿದ್ದವು.