1 Kings 7:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ಚೌಕಟ್ಟಿನ ಕೆಳಗಡೆ ನಾಲ್ಕು ಚಕ್ರಗಳಿದ್ದವು. ಈ ಚಕ್ರಗಳ ವ್ಯಾಸವು ಇಪ್ಪತ್ತೇಳು ಇಂಚುಗಳು. ಈ ಚಕ್ರಗಳ ಅಚ್ಚುಗಳನ್ನು ಬಂಡಿಯೊಂದಿಗೇ ಸೇರಿಸಿ ಅಖಂಡವಾಗಿ ನಿರ್ಮಿಸಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೇಲೆ ಕಂಡ ನಾಲ್ಕು ಗಾಲಿಗಳು ಅಡ್ಡಪಟ್ಟಿಗಳ ಕೆಳಗಿದ್ದವು. ತಿರುಗೋಲು ಮತ್ತು ಪೀಠವು ಅಖಂಡವಾಗಿದ್ದವು. ಪ್ರತಿಯೊಂದು ಗಾಲಿಯು ಒಂದುವರೆ ಮೊಳ ಎತ್ತರವಿತ್ತು.
Kannada BSI Bible 2016
ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು; ಗಾಲಿಗಳ ಅಚ್ಚುಗಳು ಆಧಾರದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು; ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೇಲೆ ಕಂಡ ನಾಲ್ಕು ಗಾಲಿಗಳು ಅಡ್ಡಪಟ್ಟಿಗಳ ಕೆಳಗಿದ್ದವು. ಇರಸೂ ಪೀಠವೂ ಅಖಂಡವಾಗಿದ್ದವು; ಪ್ರತಿಯೊಂದು ಗಾಲಿಯು ಒಂದುವರೆ ಮೊಳ ಎತ್ತರವಿತ್ತು.
Kannada Bible (KNCL) BSI 2016
ಮೇಲೆ ಕಂಡ ನಾಲ್ಕು ಗಾಲಿಗಳು ಅಡ್ಡಪಟ್ಟಿಗಳ ಕೆಳಗೆ ಇದ್ದವು. ಇರಸೂ ಪೀಠವೂ ಅಖಂಡವಾಗಿದ್ದವು; ಪ್ರತಿಯೊಂದು ಗಾಲಿಯೂ ಒಂದುವರೆ ಮೊಳ ಎತ್ತರವಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು. ಗಾಲಿಗಳ ಅಚ್ಚುಗಳು ಪೀಠದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು. ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು.