1 Kings 7:48 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವಾಲಯಕ್ಕಾಗಿ ಅನೇಕ ವಸ್ತುಗಳನ್ನು ಬಂಗಾರದಿಂದ ಮಾಡಲು ಸೊಲೊಮೋನನು ಆಜ್ಞಾಪಿಸಿದನು. ದೇವಾಲಯಕ್ಕಾಗಿ ಸೊಲೊಮೋನನು ಬಂಗಾರದಿಂದ ಮಾಡಿಸಿದ ವಸ್ತುಗಳು ಹೀಗಿವೆ: ಬಂಗಾರದ ಯಜ್ಞವೇದಿಕೆ; ಬಂಗಾರದ ಮೇಜು (ದೇವರಿಗೆ ವಿಶೇಷ ರೊಟ್ಟಿಯನ್ನು ಈ ಮೇಜಿನ ಮೇಲೆ ಅರ್ಪಿಸುತ್ತಾರೆ); ಅಪ್ಪಟ ಬಂಗಾರದ ದೀಪಸ್ತಂಭಗಳು (ಮಹಾ ಪವಿತ್ರಸ್ಥಳದ ಎದುರಿನಲ್ಲಿ ದಕ್ಷಿಣದ ಕಡೆಗೆ ಐದು ಮತ್ತು ಉತ್ತರದ ಕಡೆಗೆ ಐದು.) ಬಂಗಾರದ ಹೂಗಳು, ಹಣತೆಗಳು ಮತ್ತು ಇಕ್ಕುಳಗಳು; ಅಪ್ಪಟ ಬಂಗಾರದ ಬಟ್ಟಲುಗಳು; ದೀಪಗಳನ್ನು ಪ್ರಕಾಶಮಾನವಾಗಿ ಮಾಡಲು ಉಪಯೋಗಿಸುವ ಉಪಕರಣಗಳು; ಚಿಕ್ಕ ಗಂಗಾಳಗಳು; ಚಪ್ಪಟೆಯಾದ ಲೋಹದಿಂದ ಮಾಡಿದ ಪಾತ್ರೆಗಳು; ಬೂದಿಯನ್ನು ತೆಗೆದುಕೊಂಡು ಹೋಗಲು ಶುದ್ಧಬಂಗಾರದ ಪಾತ್ರೆಗಳು; ದೇವಾಲಯದ ಪ್ರವೇಶದ್ವಾರದ ಬಾಗಿಲುಗಳು. (Verses 48-50)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಮಾಡಿಸಿದ ಒಳಗಿನ ಸಾಮಾನುಗಳು ಯಾವುವೆಂದರೆ - ಬಂಗಾರದ ಧೂಪವೇದಿಯು ನೈವೇದ್ಯವಾದ ರೊಟ್ಟಿಗಳನ್ನಿಡುವುದಕ್ಕಾಗಿ ಬಂಗಾರದ ಮೇಜು,
Kannada BSI Bible 2016
ಇದಲ್ಲದೆ ಕರ್ತನ ಮನೆಗೆ ಸಂಬಂಧವಾದ ಪಾತ್ರೆ ಗಳನ್ನೆಲ್ಲಾ ಸೊಲೊಮೋನನು ಮಾಡಿಸಿದನು; ಯಾವ ವಂದರೆ, ಚಿನ್ನದ ಧೂಪದ ವೇದಿ, ಸಮ್ಮುಖದ ರೊಟ್ಟಿ ಗಳನ್ನು ಇಡುವದಕ್ಕೆ ಚಿನ್ನದ ಮೇಜು, ದೈವೋಕ್ತಿಯ ಸ್ಥಾನದ ಮುಂಭಾಗದ ಬಲಪಾರ್ಶ್ವದಲ್ಲಿ ಐದು,
Kannada BSI JV (ಕನ್ನಡ ಸತ್ಯವೇದವು J.V. (BSI))
ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಮಾಡಿಸಿದ ಒಳಗಿನ ಸಾಮಾನುಗಳು ಯಾವವಂದರೆ -
Kannada Bible (KNCL) BSI 2016
ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ ಒಳಗಿನ ಸಾಮಗ್ರಿಗಳು ಯಾವುವೆಂದರೆ:- ಬಂಗಾರದ ಧೂಪವೇದಿಕೆ, ನೈವೇದ್ಯವಾದ ರೊಟ್ಟಿಗಳನ್ನಿಡುವುದಕ್ಕಾಗಿ ಬಂಗಾರದ ಮೇಜು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೊಲೊಮೋನನು ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಚಿನ್ನದ ಮೇಜೂ,