1 Kings 7:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನು, “ಕಂಬಮಂಟಪ”ವನ್ನು ಸಹ ಕಟ್ಟಿಸಿದನು. ಅದರ ಉದ್ದ ಎಪ್ಪತೈದು ಅಡಿ ಮತ್ತು ಅಗಲ ನಲವತೈದು ಅಡಿ. ಅದರ ಮುಂಭಾಗದಲ್ಲೂ ಕಂಬಗಳಿಂದ ಕೂಡಿದ ಪಡಸಾಲೆಯಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಸೊಲೊಮೋನನು ಒಂದು ಕಂಬ ಮಂಟಪವನ್ನು ಕಟ್ಟಿಸಿದನು. ಅದರ ಉದ್ದ ಐವತ್ತು ಮೊಳ, ಅಗಲ ಮೂವತ್ತು ಮೊಳ. ಅದರ ಮುಂದುಗಡೆಯಲ್ಲಿ ಒಂದು ಪಡಸಾಲೆಯಿತ್ತು. ಆ ಪಡಸಾಲೆಗೆ ಕಂಬಗಳೂ ಮೆಟ್ಟಲುಗಳೂ ಇದ್ದವು.
Kannada BSI Bible 2016
ಐವತ್ತು ಮೊಳ ಉದ್ದವೂ ಮೂವತ್ತು ಮೊಳ ಅಗಲವೂ ಆದ ದ್ವಾರಾಂಗಳವನ್ನು ಸ್ತಂಭಗಳಿಂದ ಮಾಡಿದನು. ಈ ದ್ವಾರಾಂಗಳವೂ ಅದರ ಸ್ತಂಭಗಳೂ ತೊಲೆಗಳೂ ಮನೆಯ ಸ್ತಂಭಗಳಿಗೂ ತೊಲೆಗಳಿಗೂ ಎದುರಾಗಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಸೊಲೊಮೋನನು ಒಂದು ಕಂಬ ಮಂಟಪವನ್ನು ಕಟ್ಟಿಸಿದನು. ಅದರ ಉದ್ದ ಐವತ್ತು ಮೊಳ; ಅಗಲ ಮೂವತ್ತು ಮೊಳ. ಅದರ ಮುಂದುಗಡೆಯಲ್ಲಿ ಒಂದು ಪಡಸಾಲೆಯಿತ್ತು; ಆ ಪಡಸಾಲೆಗೆ ಕಂಬಗಳೂ ಮೆಟ್ಲುಗಳೂ ಇದ್ದವು.
Kannada Bible (KNCL) BSI 2016
ಇದಲ್ಲದೆ, ಸೊಲೊಮೋನನು ಒಂದು ಕಂಬಮಂಟಪವನ್ನು ಕಟ್ಟಿಸಿದನು. ಅದರ ಉದ್ದ 22 ಮೀಟರ್; ಅಗಲ 13:5 ಮೀಟರ್, ಅದರ ಮುಂದುಗಡೆಯಲ್ಲಿ ಒಂದು ಪಡಸಾಲೆಯಿತ್ತು; ಆ ಪಡಸಾಲೆಗೆ ಕಂಬಗಳೂ ಮೆಟ್ಟಲುಗಳೂ ಇದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
22 ಮೀಟರ್ ಉದ್ದವೂ, 13.5 ಮೀಟರ್ ಅಗಲವೂ ಆದ ಮಂಟಪವನ್ನು ಸ್ತಂಭಗಳಿಂದ ಮಾಡಿಸಿದನು. ಈ ಮಂಟಪವೂ, ಸ್ತಂಭಗಳೂ, ತೊಲೆಗಳೂ, ಮನೆಯ ಸ್ತಂಭಗಳಿಗೂ, ತೊಲೆಗಳಿಗೂ ಎದುರೆದುರಾಗಿದ್ದವು.