1 Kings 8:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರಾಜನಾದ ಸೊಲೊಮೋನನು ಇಸ್ರೇಲಿನ ಹಿರಿಯರೆಲ್ಲರಿಗೆ, ಕುಲಗಳ ಮುಖ್ಯಸ್ಥರಿಗೆ ಮತ್ತು ಇಸ್ರೇಲಿನ ಕುಟುಂಬ ಪ್ರಧಾನರಿಗೆ ಜೆರುಸಲೇಮಿನಲ್ಲಿದ್ದ ತನ್ನ ಬಳಿಗೆ ಬರಬೇಕೆಂದು ತಿಳಿಸಿದನು. ಒಡಂಬಡಿಕೆಯ ಪೆಟ್ಟಿಗೆಯನ್ನು ದಾವೀದ ನಗರದಿಂದ ಆಲಯಕ್ಕೆ ತರುವಾಗ ಅವರು ಸಹ ತನ್ನೊಂದಿಗಿರಬೇಕೆಂಬುದು ಸೊಲೊಮೋನನ ಅಪೇಕ್ಷೆಯಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಅರಸನಾದ ಸೊಲೊಮೋನನು ದಾವೀದ ನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೂ ಕುಲಾಧಿಪತಿಗಳು ಇವರೇ ಮೊದಲಾದ ಇಸ್ರಾಯೇಲ್ ಪ್ರಧಾನಪುರುಷರನ್ನು ಯೆರೂಸಲೇಮಿಗೆ ತನ್ನ ಹತ್ತಿರಕ್ಕೆ ಕರೆಯಿಸಿಕೊಂಡನು.
Kannada BSI Bible 2016
ಆಗ ಚೀಯೋನೆಂಬ ದಾವೀದನ ಪಟ್ಟಣ ದೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ ಅರಸನಾದ ಸೊಲೊ ಮೋನನು ಇಸ್ರಾಯೇಲಿನ ಮಕ್ಕಳಲ್ಲಿ ಶ್ರೇಷ್ಠರಾಗಿರುವ ತಂದೆಗಳಾದ ಇಸ್ರಾಯೇಲಿನ ಹಿರಿಯರನ್ನೂ ಗೋತ್ರ ಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಅರಸನಾದ ಸೊಲೊಮೋನನು ದಾವೀದನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಮೇಲೆ ತರುವದಕ್ಕಾಗಿ ಇಸ್ರಾಯೇಲ್ಯರ ಹಿರಿಯರು ಕುಲಾಧಿಪತಿಗಳು ಇವರೇ ಮೊದಲಾದ ಎಲ್ಲಾ ಇಸ್ರಾಯೇಲ್ ಪ್ರಧಾನ ಪುರುಷರನ್ನು ಯೆರೂಸಲೇವಿುಗೆ ತನ್ನ ಹತ್ತಿರಕ್ಕೆ ಕರಿಸಿಕೊಂಡನು.
Kannada Bible (KNCL) BSI 2016
ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ದಾವೀದನಗರವಾದ ಸಿಯೋನಿನಿಂದ ದೇವಾಲಯಕ್ಕೆ ತರುವುದಕ್ಕಾಗಿ, ಇಸ್ರಯೇಲರ ಹಿರಿಯರು, ಕುಲಗಳ ನಾಯಕರು, ಇವರೇ ಮೊದಲಾದ ಎಲ್ಲ ಇಸ್ರಯೇಲ್ ಪ್ರಮುಖ ವ್ಯಕ್ತಿಗಳು ಜೆರುಸಲೇಮಿಗೆ, ತನ್ನ ಆಸ್ಥಾನಕ್ಕೆ, ಬರಬೇಕೆಂದು ಅರಸ ಸೊಲೊಮೋನನು ಆಜ್ಞಾಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಅರಸನಾದ ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.