1 Kings 8:59 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನ್ನ ಈ ಪ್ರಾರ್ಥನೆಯನ್ನು ಮತ್ತು ನಾನು ಕೇಳಿಕೊಂಡವುಗಳನ್ನು ನಮ್ಮ ದೇವರಾದ ಯೆಹೋವನು ಸದಾ ಜ್ಞಾಪಿಸಿಕೊಳ್ಳಲಿ. ಯೆಹೋವನು ತನ್ನ ಸೇವಕನಾದ ರಾಜನಿಗೋಸ್ಕರವಾಗಿಯೂ ತನ್ನ ಜನರಾದ ಇಸ್ರೇಲರಿಗೋಸ್ಕರವಾಗಿಯೂ ಇವುಗಳನ್ನು ಈ ಹೊತ್ತೇ ನೆರವೇರಿಸಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಈಗ ನಮ್ಮ ದೇವರಾದ ಯೆಹೋವನಿಗೆ ಮಾಡಿದ ವಿಜ್ಞಾಪನೆಯು ಹಗಲಿರುಳು ಆತನ ಜ್ಞಾಪಕದಲ್ಲಿರಲಿ.
Kannada BSI Bible 2016
ಇದ ಲ್ಲದೆ ಕರ್ತನು ತಾನೇ ದೇವರಾಗಿದ್ದಾನೆ; ಆತನ ಹೊರತು ಬೇರೊಬ್ಬನಿಲ್ಲವೆಂದು ಭೂಲೋಕದ ಜನ ರೆಲ್ಲರೂ ತಿಳಿಯುವ ಹಾಗೆ
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಈಗ ನಮ್ಮ ದೇವರಾದ ಯೆಹೋವನಿಗೆ ಮಾಡಿದ ಪ್ರಾರ್ಥನೆಯು ಹಗಲಿರುಳು ಆತನ ಜ್ಞಾಪಕದಲ್ಲಿರಲಿ.
Kannada Bible (KNCL) BSI 2016
ನಾನು ಈಗ ನಮ್ಮ ದೇವರಾದ ಸರ್ವೇಶ್ವರನಿಗೆ ಮಾಡಿದ ಪ್ರಾರ್ಥನೆಯು ಹಗಲಿರುಳು ಅವರ ಜ್ಞಾಪಕದಲ್ಲಿರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಯೆಹೋವ ದೇವರು ತಾವೇ ದೇವರಾಗಿದ್ದಾರೆ. ಅವರ ಹೊರತು ಬೇರೊಬ್ಬರಿಲ್ಲವೆಂದು ಭೂಲೋಕದ ಜನರೆಲ್ಲರೂ ತಿಳಿಯುವ ಹಾಗೆ, ಕಾರ್ಯಕ್ಕೆ ತಕ್ಕದ್ದಾಗಿ ಸಕಲ ಕಾಲಗಳಲ್ಲಿ ತಮ್ಮ ಸೇವಕನ ನ್ಯಾಯವನ್ನೂ, ತಮ್ಮ ಜನರಾದ ಇಸ್ರಾಯೇಲಿನ ನ್ಯಾಯವನ್ನೂ ತೀರಿಸುವ ಹಾಗೆ, ನಾನು ಯೆಹೋವ ದೇವರ ಮುಂದೆ ವಿಜ್ಞಾಪನೆ ಮಾಡಿದ ಈ ನನ್ನ ಮಾತುಗಳು, ರಾತ್ರಿ ಹಗಲು ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಇರಲಿ.