1 Kings 8:64 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಂದು ರಾಜನಾದ ಸೊಲೊಮೋನನು ಆಲಯದ ಮುಂದಿನ ಅಂಗಳವನ್ನು ಪ್ರತಿಷ್ಠಿಸಿದನು. ಅವನು ಸರ್ವಾಂಗಹೋಮಗಳನ್ನು, ಧಾನ್ಯಸಮರ್ಪಣೆಗಳನ್ನು ಮತ್ತು ಸಮಾಧಾನಯಜ್ಞಕ್ಕಾಗಿ ವಧಿಸಿದ್ದ ಪಶುಗಳ ಕೊಬ್ಬನ್ನು ಅಂಗಳದಲ್ಲಿ ಅರ್ಪಿಸಿದನು. ಯಾಕೆಂದರೆ ಯೆಹೋವನ ಮುಂದೆ ಇದ್ದ ಹಿತ್ತಾಳೆಯ ಯಜ್ಞವೇದಿಕೆಯು ಈ ಎಲ್ಲವನ್ನು ಹಿಡಿಸಲಾರದಷ್ಟು ಚಿಕ್ಕದಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ಆಲಯದ ಮುಂದಿರುವ ತಾಮ್ರದ ಯಜ್ಞವೇದಿಯು ಈ ಎಲ್ಲಾ ಸರ್ವಾಂಗಹೋಮ ದ್ರವ್ಯಗಳನ್ನೂ, ಧಾನ್ಯ ನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಹಿಡಿಯಲಾರದಷ್ಟು ‍ಚಿಕ್ಕದಾಗಿದ್ದುದರಿಂದ ಸೊಲೊಮೋನನು ಆ ದಿನ ದೇವಾಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ, ಅಲ್ಲಿ ಅವುಗಳನ್ನೆಲ್ಲಾ ಸಮರ್ಪಿಸಿದನು.
Kannada BSI Bible 2016
ಅದೇ ದಿನದಲ್ಲಿ ಅರಸನು ಕರ್ತನ ಮನೆಯ ಮಧ್ಯ ಅಂಗಳವನ್ನು ಪರಿಶುದ್ಧ ಮಾಡಿದನು. ಕರ್ತನ ಮುಂದಿರುವ ತಾಮ್ರದ ಬಲಿ ಪೀಠದ ಮೇಲೆ ದಹನ ಬಲಿಗಳನ್ನೂ ಕಾಣಿಕೆಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಇಡುವದಕ್ಕೆ ಸ್ಥಳ ಸಾಲದೆ ಇದ್ದದರಿಂದ ಅಲ್ಲಿ ದಹನಬಲಿಗಳನ್ನೂ ಕಾಣಿಕೆಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನ ಆಲಯದ ಮುಂದಿರುವ ತಾಮ್ರದ ಯಜ್ಞವೇದಿಯು ಈ ಎಲ್ಲಾ ಸರ್ವಾಂಗಹೋಮದ್ರವ್ಯಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಹಿಡಿಯಲಾರದಷ್ಟು ಚಿಕ್ಕದಾಗಿದ್ದದರಿಂದ ಸೊಲೊಮೋನನು ಆ ದಿವಸ ದೇವಾಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ ಅಲ್ಲಿ ಇವುಗಳನ್ನೆಲ್ಲಾ ಸಮರ್ಪಿಸಿದನು.
Kannada Bible (KNCL) BSI 2016
ಸರ್ವೇಶ್ವರನ ಆಲಯದ ಮುಂದಿರುವ ತಾಮ್ರದ ಬಲಿಪೀಠ ಈ ಎಲ್ಲಾ ದಹನಬಲಿದ್ರವ್ಯಗಳನ್ನೂ ಧಾನ್ಯನೈವೇದ್ಯಗಳನ್ನೂ‌ ಸಮಾಧಾನ ಬಲಿಯ ಕೊಬ್ಬನ್ನೂ ಹಿಡಿಸುವಷ್ಟು ದೊಡ್ಡದಾಗಿರಲಿಲ್ಲ. ಆದುದರಿಂದ ಸೊಲೊಮೋನನು ಆ ದಿವಸ ದೇವಾಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ ಅಲ್ಲಿಯೂ ಇವುಗಳನ್ನೆಲ್ಲ ಸಮರ್ಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದೇ ಕಾಲದಲ್ಲಿ ಸೊಲೊಮೋನನೂ, ಅವನ ಸಂಗಡ ಲೆಬೊ ಹಮಾತಿನ ಪ್ರದೇಶ ಮೊದಲುಗೊಂಡು ಈಜಿಪ್ಟಿನ ನದಿಯವರೆಗೆ ಇರುವ ಮಹಾ ಜನಾಂಗವಾಗಿ ಕೂಡಿಬಂದಿದ್ದ ಸಮಸ್ತ ಇಸ್ರಾಯೇಲರೂ ತಮ್ಮ ದೇವರಾದ ಯೆಹೋವ ದೇವರ ಮುಂದೆ ಏಳೇಳು ದಿನಗಳು ಅಂದರೆ ಹದಿನಾಲ್ಕು ದಿವಸ ಹಬ್ಬವನ್ನು ಆಚರಿಸಿದರು.