1 Peter 2:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪ್ರಭುವಾದ ಯೇಸುವೇ ಜೀವವುಳ್ಳ ‘‘ಕಲ್ಲು.’’ ಈ ಲೋಕದ ಜನರು ತಮಗೆ ಆ ‘‘ಕಲ್ಲು’’ (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ ‘‘ಕಲ್ಲು.’’ ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ.
Kannada BSI Bible 2016
ನೀವು ಜೀವವುಳ್ಳ ಕಲ್ಲಾಗಿರು ವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲು ಮನುಷ್ಯರಿಂದ ನಿಜವಾಗಿಯೂ ನಿರಾಕರಿಸಲ್ಪಟ್ಟಿದ್ದರೂ ಅದು ದೇವ ರಿಂದ ಆಯಲ್ಪಟ್ಟದ್ದೂ ಅಮೂಲ್ಯವಾದದ್ದೂ ಆಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕಲ್ಲನ್ನು ಮನುಷ್ಯರು ನಿರಾಕರಿಸಿದರೂ ದೇವರು ಅದನ್ನು ಆಯಲ್ಪಟ್ಟದ್ದೂ ಮಾನ್ಯವಾದದ್ದೂ ಎಂದು ಎಣಿಸಿದನು.
Kannada Bible (KNCL) BSI 2016
ಪ್ರಭುವಿನ ಬಳಿಗೆ ಬನ್ನಿ; ಸಜೀವ ಶಿಲೆಯಾದ ಅವರನ್ನು ಮಾನವರು ನಿಷ್ಪ್ರಯೋಜಕ ಎಂದು ತಿರಸ್ಕರಿಸಿದರೂ ದೇವರು ಅಮೂಲ್ಯರೆಂದು ಆರಿಸಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಸಜೀವ ಕಲ್ಲಾಗಿರುವವರ ಬಳಿಗೆ ಬಂದಿದ್ದೀರಿ. ಆ ಕಲ್ಲು ಮನುಷ್ಯರಿಂದ ನಿರಾಕರಿಸಿದರೂ ಅದು ದೇವರಿಂದ ಆರಿಸಿಕೊಂಡದ್ದೂ ಅವರಿಗೆ ಅಮೂಲ್ಯವಾದದ್ದೂ ಆಯಿತು.