1 Peter 3:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಹು ಕಾಲದ ಹಿಂದೆ ಜೀವಿಸಿದ್ದು ದೇವರನ್ನು ಅನುಸರಿಸುತ್ತಾ ಪರಿಶುದ್ಧರಾಗಿದ್ದ ಸ್ತ್ರೀಯರು ಇದೇ ರೀತಿಯಲ್ಲಿ ತಮ್ಮನ್ನು ಶೃಂಗರಿಸಿಕೊಂಡರು. ಅವರು ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದ ಭಕ್ತೆಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು.
Kannada BSI Bible 2016
ಪೂರ್ವಕಾಲದಲ್ಲಿ ದೇವರ ಮೇಲೆ ನಂಬಿಕೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಆಲಂಕರಿಸಿಕೊಂಡರು; ಅವರು ತಮ್ಮ ತಮ್ಮ ಗಂಡಂ ದಿರಿಗೆ ಅಧೀನರಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ. ಪೂರ್ವಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಭಕ್ತೆಯರಾದ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದು ಯಾವ ಭೀತಿಗೂ ಗಾಬರಿಪಡದೆ ಒಳ್ಳೇದನ್ನೇ ಮಾಡುವವರಾಗಿದ್ದರು.
Kannada Bible (KNCL) BSI 2016
ಪ್ರಾಚೀನಕಾಲದ ದೈವಭಕ್ತೆಯರಾದ ಸ್ತ್ರೀಯರು ಹೀಗೆಯೇ ಸಿಂಗರಿಸಿಕೊಂಡು ತಮ್ಮ ತಮ್ಮ ಪತಿಯರಿಗೆ ವಿಧೇಯರಾಗಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೂರ್ವಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಪತಿಯರಿಗೆ ಅಧೀನರಾಗಿದ್ದರು.