1 Peter 4:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವು ಕ್ರೈಸ್ತರಾಗಿರುವುದರಿಂದ ಸಂಕಟಪಟ್ಟರೆ, ನಾಚಿಕೊಳ್ಳಬಾರದು. ಆ (ಕ್ರೈಸ್ತ) ಹೆಸರಿನ ನಿಮಿತ್ತ ನೀವು ದೇವರಿಗೆ ಸ್ತೋತ್ರ ಮಾಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.
Kannada BSI Bible 2016
ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಅದರಲ್ಲಿಯೇ ದೇವರನ್ನು ಘನಪಡಿಸಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.
Kannada Bible (KNCL) BSI 2016
ಅದಕ್ಕೆ ಪ್ರತಿಯಾಗಿ, ಒಬ್ಬನು ಕ್ರೈಸ್ತವಿಶ್ವಾಸಿ ಎಂಬ ಕಾರಣದಿಂದ ಹಿಂಸೆಯನ್ನು ಅನುಭವಿಸಿದರೆ ಅಂಥವನು ನಾಚಿಕೆಪಡಬೇಕಾಗಿಲ್ಲ; ಕ್ರೈಸ್ತವಿಶ್ವಾಸಿ ಎಂಬ ಆ ಹೆಸರನ್ನು ಪಡೆದುದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವವರಾಗಿ ಬಾಧೆಪಟ್ಟರೆ ನಾಚಿಕೆಪಡಬೇಡಿರಿ. ಆ ಹೆಸರನ್ನು ಹೊಂದಿದ್ದಕ್ಕಾಗಿ ದೇವರನ್ನು ಘನಪಡಿಸಲಿ.