1 Samuel 1:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹನ್ನಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಹನ್ನಳು ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು. ಅವಳು, “ಅವನ ಹೆಸರು ಸಮುವೇಲ, ಏಕೆಂದರೆ ನಾನು ಅವನಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದ್ದೆ” ಎಂದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹನ್ನಳು ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. ಯೆಹೋವನನ್ನು ಬೇಡಿ ಪಡೆದುಕೊಂಡೆನೆಂದು ಹೇಳಿ ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು.
Kannada BSI Bible 2016
ಹನ್ನಳು ಗರ್ಭವತಿ ಯಾಗಿ ಕಾಲವು ಪೂರ್ತಿಯಾದ ತರುವಾಯ ಆದದ್ದೇ ನಂದರೆ, ಅವಳು ಮಗನನ್ನು ಹೆತ್ತು--ನಾನು ಅವನನ್ನು ಕರ್ತನ ಬಳಿಯಲ್ಲಿ ಕೇಳಿಕೊಂಡೆನು ಎಂದು ಹೇಳಿ ಅವನಿಗೆ ಸಮುವೇಲನೆಂದು ಹೆಸರಿಟ್ಟಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. ಯೆಹೋವನನ್ನು ಬೇಡಿ ಪಡಕೊಂಡೆನೆಂದು ಹೇಳಿ ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು.
Kannada Bible (KNCL) BSI 2016
ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. “ನಾನು ಇವನನ್ನು ಸರ್ವೇಶ್ವರನಿಂದ ಬೇಡಿ ಪಡೆದೆ,” ಎಂದು ಹೇಳಿ ಆ ಮಗುವಿಗೆ ‘ಸಮುವೇಲ’ ಎಂದು ಹೆಸರಿಟ್ಟಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹನ್ನಳು ಗರ್ಭವತಿಯಾಗಿ, ಕಾಲವು ಪೂರ್ತಿಯಾದ ತರುವಾಯ ಮಗನನ್ನು ಹೆತ್ತು, “ನಾನು ಇವನಿಗಾಗಿ ಯೆಹೋವ ದೇವರನ್ನು ಬೇಡಿ ಪಡೆದುಕೊಂಡೆನು,” ಎಂದು ಹೇಳಿ ಅವನಿಗೆ, ಸಮುಯೇಲ ಎಂದು ಹೆಸರಿಟ್ಟಳು.

Recommended Reading