1 Samuel 1:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹನ್ನಳ ಗಂಡನಾದ ಎಲ್ಕಾನನು ಅವಳಿಗೆ, “ನಿನಗೆ ಸರಿತೋರಿದಂತೆ ಮಾಡು. ಮಗುವು ಗಟ್ಟಿಯಾದ ಊಟ ಮಾಡುವಷ್ಟು ವಯಸ್ಸಾಗುವ ತನಕ ಮನೆಯಲ್ಲಿಯೇ ಇರು. ನೀನು ಹೇಳಿದ್ದನ್ನು ಯೆಹೋವನು ನೆರವೇರಿಸಲಿ” ಎಂದು ಹೇಳಿದನು. ಆದ್ದರಿಂದ ಹನ್ನಳು ತನ್ನ ಮಗುವು ಗಟ್ಟಿಯಾದ ಆಹಾರವನ್ನು ತಿನ್ನಲು ಆರಂಭಿಸುವ ತನಕ ಆರೈಕೆಮಾಡಿ ಬೆಳೆಸಲು ಮನೆಯಲ್ಲಿಯೇ ಇದ್ದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯ ಗಂಡನಾದ ಎಲ್ಕಾನನು ಆಕೆಗೆ “ನಿನಗೆ ಸರಿತೋರುವ ಹಾಗೆ ಆಗಲಿ; ಮಗನು ಮೊಲೆಬಿಡುವವರೆಗೆ ಇರು. ಯೆಹೋವನು ತನ್ನ ವಾಕ್ಯವನ್ನು ದೃಢಪಡಿಸಲಿ” ಅಂದನು. ಮಗನು ಮೊಲೆಬಿಡುವ ತನಕ ಹನ್ನಳು ಮನೆಯಲ್ಲೇ ಇದ್ದು ಅವನನ್ನು ಸಾಕಿದಳು.
Kannada BSI Bible 2016
ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ--ನೀನು ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವ ಹಾಗೆ ಮಾಡು. ಅವನು ಮೊಲೆ ಬಿಡುವವರೆಗೂ ಕಾದುಕೊಂಡಿರು. ಕರ್ತನು ತನ್ನ ವಾಕ್ಯವನ್ನು ಸ್ಥಿರಮಾಡಲಿ ಅಂದನು. ಹಾಗೆಯೇ ಅವಳು ಉಳಿದು ತನ್ನ ಮಗುವು ಮೊಲೆ ಬಿಡುವವರೆಗೂ ಅವನಿಗೆ ಮೊಲೆ ಕೊಡುತ್ತಿದ್ದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯ ಗಂಡನಾದ ಎಲ್ಕಾನನು ಆಕೆಗೆ - ನಿನಗೆ ಸರಿತೋರುವ ಪ್ರಕಾರ ಆಗಲಿ; ಮಗನು ಮೊಲೆಬಿಡುವವರೆಗೆ ಇರು. ಯೆಹೋವನು ತನ್ನ ವಾಕ್ಯವನ್ನು ದೃಢಪಡಿಸಲಿ ಅಂದನು. ಮಗನು ಮೊಲೆಬಿಡುವ ತನಕ ಹನ್ನಳು ಮನೆಯಲ್ಲೇ ಇದ್ದು ಅವನನ್ನು ಸಾಕಿದಳು.
Kannada Bible (KNCL) BSI 2016
ಗಂಡನಾದ ಎಲ್ಕಾನನು, “ಹಾಗೆಯೇ ಆಗಲಿ; ನಿನಗೆ ಸರಿತೋರಿದಂತೆ ಮಾಡು. ಮಗು ಮೊಲೆಬಿಡುವವರೆಗೆ ಮನೆಯಲ್ಲೇ ಇರು. ಸರ್ವೇಶ್ವರ ನಿನ್ನ ಮಾತನ್ನು ದೃಢವಾಗಿಸಲಿ,” ಎಂದನು. ಮಗು ಮೊಲೆಬಿಡುವ ತನಕ ಹನ್ನಳು ಮನೆಯಲ್ಲೇ ಇದ್ದು ಅವನನ್ನು ಆರೈಕೆ ಮಾಡಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ, “ನೀನು ನಿನಗೆ ಒಳ್ಳೆಯದಾಗಿ ತೋರುವ ಹಾಗೆ ಮಾಡು. ಅವನು ಎದೆಹಾಲು ಕುಡಿಯುವುದನ್ನು ಬಿಡುವವರೆಗೂ ಕಾದುಕೊಂಡಿರು. ಯೆಹೋವ ದೇವರು ತಮ್ಮ ವಾಕ್ಯವನ್ನು ಪೂರೈಸಲಿ,” ಎಂದನು. ಹಾಗೆಯೇ ಅವಳು ನಿಂತು ತನ್ನ ಮಗುವು ಎದೆಹಾಲು ಬಿಡುವವರೆಗೂ ಅವನಿಗೆ ಎದೆಹಾಲು ಕೊಡುತ್ತಿದ್ದಳು.