1 Samuel 10:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೌಲನ ಚಿಕ್ಕಪ್ಪನು ಸೌಲನನ್ನು ಮತ್ತು ಅವನ ಸೇವಕನನ್ನು, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು. ಸೌಲನು ಅವನಿಗೆ, “ನಾವು ಕತ್ತೆಗಳನ್ನು ಹುಡುಕುತ್ತಿದ್ದೆವು. ನಾವು ಅವುಗಳನ್ನು ಕಂಡುಕೊಳ್ಳಲಾರದೆ ಹೋದಾಗ ಸಮುವೇಲನನ್ನು ನೋಡಲು ಹೋದೆವು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಲು ಅವನು, “ಕತ್ತೆಗಳನ್ನು ಹುಡುಕುವುದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲವಾದ್ದರಿಂದ ಸಮುವೇಲನ ಬಳಿಗೆ ಹೋದೆವು” ಅಂದನು.
Kannada BSI Bible 2016
ಆಗ ಸೌಲನ ಚಿಕ್ಕಪ್ಪನು--ನೀವು ಎಲ್ಲಿ ಹೋದಿರಿ ಎಂದು ಅವನನ್ನೂ ಅವನ ಸೇವಕನನ್ನೂ ಕೇಳಿದನು. ಅದಕ್ಕವನು--ಕತ್ತೆ ಗಳನ್ನು ಹುಡುಕುವದಕ್ಕೆ; ಅವುಗಳು ಕಾಣದೆ ಹೋದ ದರಿಂದ ಸಮುವೇಲನ ಬಳಿಗೆ ಹೋದೆವು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ - ನೀವು ಎಲ್ಲಿಗೆ ಹೋಗಿದ್ದಿರಿ ಎಂದು ಕೇಳಲು ಅವನು - ಕತ್ತೆಗಳನ್ನು ಹುಡುಕುವದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲವಾದದರಿಂದ ಸಮುವೇಲನ ಬಳಿಗೆ ಹೋದೆವು ಅಂದನು.
Kannada Bible (KNCL) BSI 2016
ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ ನೋಡಿ, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು. ಅವನು, “ಕತ್ತೆಗಳನ್ನು ಹುಡುಕುವುದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲ. ಆದುದರಿಂದ ಸಮುವೇಲನ ಬಳಿಗೆ ಹೋದೆವು,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸೌಲನ ಚಿಕ್ಕಪ್ಪನು, “ನೀವು ಎಲ್ಲಿಗೆ ಹೋದಿರಿ?” ಎಂದು ಅವನನ್ನೂ, ಅವನ ಸೇವಕನನ್ನೂ ಕೇಳಿದನು. ಅದಕ್ಕವನು, “ಕತ್ತೆಗಳನ್ನು ಹುಡುಕುವುದಕ್ಕೆ, ಅವುಗಳನ್ನು ಕಾಣದೆ ಹೋದುದರಿಂದ ಸಮುಯೇಲನ ಬಳಿಗೆ ಹೋದೆವು,” ಎಂದನು.