1 Samuel 10:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೌಲನು ಸಮುವೇಲನನ್ನು ಬಿಟ್ಟುಹೊರಡಲು ತಿರುಗಿದಂತೆಯೇ ದೇವರು ಸಹ ಸೌಲನ ಜೀವಿತವನ್ನು ಮಾರ್ಪಾಟು ಮಾಡಿದನು. ಅಂದು ಆ ಸಂಗತಿಗಳೆಲ್ಲಾ ಸಂಭವಿಸಿದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಹೃದಯವನ್ನು ಕೊಟ್ಟನು. ಅದೇ ದಿನದಲ್ಲಿ ಆ ಎಲ್ಲಾ ಗುರುತುಗಳು ಸಂಭವಿಸಿದವು.
Kannada BSI Bible 2016
ಅವನು ಸಮುವೇಲನನ್ನು ಬಿಟ್ಟುಹೋಗಲು ಹಿಂದಿರುಗಿದಾಗ ಏನಾಯಿತಂದರೆ, ದೇವರು ಅವನಿಗೆ ಬೇರೆ ಹೃದಯವನ್ನು ಕೊಟ್ಟನು; ಆ ಸಮಸ್ತ ಗುರುತುಗಳು ಆ ದಿವಸದಲ್ಲಿ ಅವನಿಗೆ ಸಂಭವಿಸಿದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಹೃದಯವನ್ನು ಕೊಟ್ಟನು. ಅದೇ ದಿನದಲ್ಲಿ ಆ ಎಲ್ಲಾ ಗುರುತುಗಳು ಸಂಭವಿಸಿದವು.
Kannada Bible (KNCL) BSI 2016
ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಚೈತನ್ಯವನ್ನು ಕೊಟ್ಟರು. ಅದೇ ದಿನದಲ್ಲಿ ಆ ಎಲ್ಲ ಘಟನೆಗಳು ಸಂಭವಿಸಿದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಸಮುಯೇಲನನ್ನು ಬಿಟ್ಟುಹೋಗಲು ಹಿಂದಿರುಗಿದಾಗ, ದೇವರು ಅವನಿಗೆ ಹೊಸ ಹೃದಯವನ್ನು ಕೊಟ್ಟರು. ಆ ಸಮಸ್ತ ಗುರುತುಗಳು ಆ ದಿವಸದಲ್ಲಿ ಅವನಿಗೆ ಸಂಭವಿಸಿದವು.