1 Samuel 12:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಮುವೇಲನು ಯೆಹೋವನಲ್ಲಿ ಪ್ರಾರ್ಥಿಸಿದನು. ಅದೇ ದಿನ ಯೆಹೋವನು ಗುಡುಗು ಮತ್ತು ಮಳೆಗಳನ್ನು ಕಳುಹಿಸಿದನು. ಜನರು ಯೆಹೋವನ ಬಗ್ಗೆ ಮತ್ತು ಸಮುವೇಲನ ಬಗ್ಗೆ ಬಹಳ ಭಯಗೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೆಹೋವನು ಗುಡುಗು ಮಳೆಗಳನ್ನು ಕಳುಹಿಸಿದನು. ಎಲ್ಲಾ ಜನರು ಯೆಹೋವನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟು
Kannada BSI Bible 2016
ಸಮುವೇಲನು ಕರ್ತನಿಗೆ ಮೊರೆ ಇಟ್ಟದ್ದರಿಂದ ಆ ದಿವಸದಲ್ಲೇ ಕರ್ತನು ಗುಡುಗನ್ನೂ ಮಳೆಯನ್ನೂ ಕಳುಹಿಸಿದನು. ಆಗ ಜನರೆಲ್ಲರು ಕರ್ತನಿಗೂ ಸಮು ವೇಲನಿಗೂ ಬಹಳವಾಗಿ ಭಯಪಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ಗುಡುಗು ಮಳೆಗಳನ್ನು ಕಳುಹಿಸಿದನು. ಎಲ್ಲಾ ಜನರೂ ಯೆಹೋವನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟು ಸಮುವೇಲನನ್ನು -
Kannada Bible (KNCL) BSI 2016
ಅಂತೆಯೇ ಸಮುವೇಲನು ಮೊರೆ ಇಡಲು ಸರ್ವೇಶ್ವರ ಗುಡುಗು ಮಳೆಗಳನ್ನು ಕಳುಹಿಸಿದರು. ಜನರೆಲ್ಲರು ಸರ್ವೇಶ್ವರನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಮುಯೇಲನು ಯೆಹೋವ ದೇವರಿಗೆ ಮೊರೆ ಇಟ್ಟಿದ್ದರಿಂದ, ಆ ದಿವಸದಲ್ಲೇ ಯೆಹೋವ ದೇವರು ಗುಡುಗನ್ನೂ, ಮಳೆಯನ್ನೂ ಕಳುಹಿಸಿದರು. ಆಗ ಜನರೆಲ್ಲರು ಯೆಹೋವ ದೇವರಿಗೂ, ಸಮುಯೇಲನಿಗೂ ಬಹಳವಾಗಿ ಭಯಪಟ್ಟರು.