1 Samuel 12:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಮುವೇಲನು ಇಸ್ರೇಲರಿಗೆ, “ನಿಮ್ಮ ಮಾತುಗಳಿಗೆಲ್ಲ ಯೆಹೋವನೇ ಸಾಕ್ಷಿ. ಯೆಹೋವನಿಂದ ಆಯ್ಕೆಯಾದ ರಾಜನೂ ಈ ದಿನ ಸಾಕ್ಷಿಯಾಗಿದ್ದಾನೆ. ನೀವು ನನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲವೆನ್ನುವುದಕ್ಕೆ ಈ ಇಬ್ಬರು ಸಾಕ್ಷಿಗಳಾಗಿದ್ದಾರೆ” ಎಂದು ಹೇಳಿದನು. ಜನರು, “ಹೌದು, ಯೆಹೋವನೇ ಸಾಕ್ಷಿ” ಎಂದು ಉತ್ತರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಮುವೇಲನು ಪುನಃ “ನೀವು ನನ್ನಲ್ಲಿ ಇಂಥದನ್ನೇನೂ ಕಾಣಲಿಲ್ಲ ಎಂಬುದಕ್ಕೆ ಯೆಹೋವನೂ ಆತನ ಅಭಿಷಿಕ್ತನೂ ಸಾಕ್ಷಿಯಾಗಿದ್ದಾರೆ” ಎಂದನು. ಅವರು, “ಹೌದು, ಯೆಹೋವನೇ ಸಾಕ್ಷಿಯಾಗಿದ್ದಾನೆ” ಎಂದು ಹೇಳಿದರು.
Kannada BSI Bible 2016
ಅವನು ಅವರಿಗೆ--ನೀವು ನನ್ನಲ್ಲಿ ಏನಾದರೂ ಕಂಡು ಹಿಡಿಯಲಿಲ್ಲವೆಂಬದಕ್ಕೆ ಕರ್ತನೇ ನಿಮಗೆ ಸಾಕ್ಷಿಯಾಗಿ ದ್ದಾನೆ; ಆತನ ಅಭಿಷಿಕ್ತನು ಈಹೊತ್ತು ಸಾಕ್ಷಿಯಾಗಿದ್ದಾನೆ ಅಂದನು. ಅದಕ್ಕವರು--ಆತನು ಸಾಕ್ಷಿಯಾಗಿದ್ದಾನೆ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಮುವೇಲನು ತಿರಿಗಿ - ನೀವು ನನ್ನಲ್ಲಿ ಇಂಥದನ್ನೇನೂ ಕಾಣಲಿಲ್ಲವೆಂಬದಕ್ಕೆ ಯೆಹೋವನೂ ಆತನ ಅಭಿಷಿಕ್ತನೂ ಸಾಕ್ಷಿಯಾಗಿದ್ದಾರೆ ಎನ್ನಲು ಅವರು - ಹೌದು, ಸಾಕ್ಷಿಯಾಗಿದ್ದಾರೆ ಎಂದು ನುಡಿದರು.
Kannada Bible (KNCL) BSI 2016
ಸಮುವೇಲನು ಪುನಃ, “ನೀವು ನನ್ನಲ್ಲಿ ಇಂಥದನ್ನೇನೂ ಕಾಣಲಿಲ್ಲವೆಂಬುದಕ್ಕೆ ಸರ್ವೇಶ್ವರ ಹಾಗು ಅವರ ಅಭಿಷಿಕ್ತನು ಸಾಕ್ಷಿಯಾಗಿದ್ದಾರೆ,” ಎಂದನು. ಅವರು, “ಹೌದು, ಸರ್ವೇಶ್ವರ ಸಾಕ್ಷಿ ಆಗಿದ್ದಾರೆ,” ಎಂದು ನುಡಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು ಅವರಿಗೆ, “ನೀವು ನನ್ನಲ್ಲಿ ಏನಾದರೂ ಕಂಡು ಹಿಡಿಯಲಿಲ್ಲವೆಂಬುದಕ್ಕೆ ಯೆಹೋವ ದೇವರೇ ನಿಮಗೆ ಸಾಕ್ಷಿಯಾಗಿದ್ದಾರೆ. ಅವರ ಅಭಿಷಿಕ್ತನು ಈ ಹೊತ್ತು ಸಾಕ್ಷಿಯಾಗಿದ್ದಾನೆ,” ಎಂದನು. ಅದಕ್ಕವರು, “ಸಾಕ್ಷಿಯಾಗಿದ್ದಾರೆ,” ಎಂದರು.