1 Samuel 12:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಸಮುವೇಲನು ಜನರಿಗೆ, “ಯೆಹೋವನೇ ಸಾಕ್ಷಿ. ಯೆಹೋವನು, ಮೋಶೆ ಆರೋನರನ್ನು ಆರಿಸಿಕೊಂಡನು. ಆತನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಸಮುವೇಲನು, “ನಿಮ್ಮ ಪೂರ್ವಿಕರನ್ನು ಐಗುಪ್ತದಿಂದ ಕರೆತರುವುದಕ್ಕಾಗಿ ಮೋಶೆ ಹಾಗೂ ಆರೋನರನ್ನು ನೇಮಿಸಿದ ಯೆಹೋವನೇ ಇದಕ್ಕೆ ಸಾಕ್ಷಿ.
Kannada BSI Bible 2016
ಆಗ ಸಮುವೇಲನು ಜನರಿಗೆ--ಮೋಶೆ ಯನ್ನೂ ಆರೋನನನ್ನೂ ಮುಂದಕ್ಕೆ ತಂದು ನಿಮ್ಮ ಪಿತೃಗಳನ್ನು ಐಗುಪ್ತದೇಶದೊಳಗಿಂದ ಬರಮಾಡಿದ ಕರ್ತನೇ ಇದಕ್ಕೆ ಸಾಕ್ಷಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಸಮುವೇಲನು - ನಿಮ್ಮ ಪಿತೃಗಳನ್ನು ಐಗುಪ್ತದಿಂದ ಕರತರುವದಕ್ಕಾಗಿ ಮೋಶೆ ಆರೋನರನ್ನು ಏರ್ಪಡಿಸಿದ ಯೆಹೋವನೇ ಇದಕ್ಕೆ ಸಾಕ್ಷಿ.
Kannada Bible (KNCL) BSI 2016
ಆಗ ಸಮುವೇಲನು, “ನಿಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಕರೆದುತರುವುದಕ್ಕಾಗಿ ಮೋಶೆ ಹಾಗು ಆರೋನರನ್ನು ನೇಮಿಸಿದ ಸರ್ವೇಶ್ವರಸ್ವಾಮಿಯೇ ಇದಕ್ಕೆ ಸಾಕ್ಷಿ: ಇಲ್ಲಿ ನಿಂತುಕೊಳ್ಳಿರಿ:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸಮುಯೇಲನು ಜನರಿಗೆ, “ಮೋಶೆಯನ್ನೂ, ಆರೋನನನ್ನೂ ಮುಂದಕ್ಕೆ ತಂದವರೂ, ನಿಮ್ಮ ಪಿತೃಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ಯೆಹೋವ ದೇವರೇ ಇದಕ್ಕೆ ಸಾಕ್ಷಿ.