1 Samuel 13:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಫಿಲಿಷ್ಟಿಯರು ಮಾತ್ರ ಕಬ್ಬಿಣದ ವಸ್ತುಗಳನ್ನು ಹರಿತಗೊಳಿಸುತ್ತಿದ್ದರು. ಆದ್ದರಿಂದ ಇಸ್ರೇಲರು ತಮ್ಮ ನೇಗಿಲುಗಳನ್ನು, ಗುದ್ದಲಿಗಳನ್ನು, ಸಲಿಕೆಗಳನ್ನು ಮತ್ತು ಕೊಡಲಿಗಳನ್ನು ಹರಿತಗೊಳಿಸಲು ಫಿಲಿಷ್ಟಿಯರ ಹತ್ತಿರಕ್ಕೆ ಹೋಗಬೇಕಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ತಮ್ಮ ನೇಗಿಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹರಿತ ಮಾಡಿಸುವುದಕ್ಕೆ ಫಿಲಿಷ್ಟಿಯರ ಹತ್ತಿರವೇ ಹೋಗಬೇಕಿತ್ತು.
Kannada BSI Bible 2016
ಆದದರಿಂದ ಇಸ್ರಾಯೇಲ್ಲೆಲ್ಲಾ ತಮ್ಮ ತಮ್ಮ ನೇಗಲಿನ ಗುಳಗಳನ್ನೂ ಸಲಿಕೆಗಳನ್ನೂ ಕೊಡಲಿಗಳನ್ನೂ ಗುದ್ದಲಿಗಳನ್ನೂ ಮೊನೆ ಮಾಡುವದಕ್ಕೆ ಫಿಲಿಷ್ಟಿಯರ ಬಳಿಗೆ ಹೋಗಬೇಕಾ ಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
(ಅವರು ತಮ್ಮ ನೇಗಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹಣಿಸುವದಕ್ಕೋಸ್ಕರ ಫಿಲಿಷ್ಟಿಯರ ಹತ್ತಿರವೇ ಹೋಗಬೇಕಿತ್ತು.
Kannada Bible (KNCL) BSI 2016
(ಅವರು ತಮ್ಮ ನೇಗಿಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹಣಿಸುವುದಕ್ಕಾಗಿ ಫಿಲಿಷ್ಟಿಯರ ಬಳಿಗೆ ಹೋಗಬೇಕಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಇಸ್ರಾಯೇಲರೆಲ್ಲಾ ತಮ್ಮ ತಮ್ಮ ನೇಗಿಲಿನ ಗುಳಗಳನ್ನೂ, ಸಲಿಕೆಗಳನ್ನೂ, ಕೊಡಲಿಗಳನ್ನೂ, ಗುದ್ದಲಿಗಳನ್ನೂ ಮೊನೆ ಮಾಡುವುದಕ್ಕೆ ಫಿಲಿಷ್ಟಿಯರ ಬಳಿಗೆ ಹೋಗಬೇಕಾಗಿತ್ತು.