1 Samuel 14:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಫಿಲಿಷ್ಟಿಯರ ಸೇವೆಯಲ್ಲಿ ಮೊದಲಿಂದಲೂ ಇದ್ದ ಇಬ್ರಿಯರು ಈಗಲೂ ಅವರ ಪಾಳೆಯದಲ್ಲಿದ್ದರು. ಆದರೆ ಆಗ ಈ ಇಬ್ರಿಯರು ಸೌಲ ಮತ್ತು ಯೋನಾತಾನರೊಂದಿಗೆ ಸೇರಿಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಮೊದಲಿನಿಂದಲೇ ಫಿಲಿಷ್ಟಿಯರನ್ನು ಸೇರಿಕೊಂಡು ಅವರೊಡನೆ ಪಾಳೆಯದಲ್ಲಿದ್ದ ಇಬ್ರಿಯರು, ಸೌಲ ಮತ್ತು ಯೋನಾತಾನರ ಜೊತೆಯಲ್ಲಿ ಬಂದ ಇಸ್ರಾಯೇಲರನ್ನು ಕೂಡಿಕೊಂಡರು.
Kannada BSI Bible 2016
ಇದಲ್ಲದೆ ಪೂರ್ವದಲ್ಲಿ ಫಿಲಿಷ್ಟಿಯರ ಬಳಿಯಲ್ಲಿದ್ದು ಅವರ ಕೂಡ ದಂಡಿನ ಸಂಗಡ ಸುತ್ತಲಿರುವ ದೇಶದಿಂದ ಬಂದ ಇಬ್ರಿಯರು ಸೌಲ ಯೋನಾತಾನನ ಮತ್ತು ಇಸ್ರಾಯೇಲ್ಯರ ಸಂಗಡ ಕೂಡಿಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಮುಂಚಿನಿಂದಲೇ ಫಿಲಿಷ್ಟಿಯರನ್ನು ಸೇರಿಕೊಂಡು ಅವರೊಡನೆ ಪಾಳೆಯದಲ್ಲಿದ್ದ ಇಬ್ರಿಯರು ಸೌಲ ಯೋನಾತಾನರ ಜೊತೆಯಲ್ಲಿ ಬಂದ ಇಸ್ರಾಯೇಲ್ಯರನ್ನು ಕೂಡಿಕೊಂಡರು.
Kannada Bible (KNCL) BSI 2016
ಇದಲ್ಲದೆ, ಮುಂದಿನಿಂದಲೇ ಫಿಲಿಷ್ಟಿಯರನ್ನು ಸೇರಿಕೊಂಡು ಅವರೊಡನೆ ಪಾಳೆಯದಲ್ಲಿದ್ದ ಹಿಬ್ರಿಯರು, ಸೌಲ-ಯೋನಾತಾನರ ಜೊತೆಯಲ್ಲಿ ಬಂದ ಇಸ್ರಯೇಲರನ್ನು ಕೂಡಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಪೂರ್ವದಲ್ಲಿ ಫಿಲಿಷ್ಟಿಯರ ಬಳಿಯಲ್ಲಿದ್ದು ಅವರೊಡನೆ ದಂಡಿನ ಸಂಗಡ ಸುತ್ತಲಿರುವ ದೇಶದಿಂದ ಬಂದ ಹಿಬ್ರಿಯರು ಸೌಲ ಮತ್ತು, ಯೋನಾತಾನನ ಜೊತೆ ಇರುವ ಇಸ್ರಾಯೇಲರ ಸಂಗಡ ಕೂಡಿಕೊಂಡರು.