1 Samuel 14:41 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಸೌಲನು, “ಇಸ್ರೇಲಿನ ದೇವರಾದ ಯೆಹೋವನೇ, ನಾನು ನಿನ್ನ ಸೇವಕ. ಈ ದಿನ ನೀನು ನನಗೇಕೆ ಉತ್ತರಿಸಲಿಲ್ಲ? ನಾನಾಗಲಿ ನನ್ನ ಮಗನಾದ ಯೋನಾತಾನನಾಗಲಿ ಇಸ್ರೇಲರಾಗಲಿ ಪಾಪಮಾಡಿದ್ದರೆ ಅದನ್ನು ನಮಗೆ ತಿಳಿಸಿಕೊಡು” ಎಂದು ಪ್ರಾರ್ಥಿಸಿದನು. ಚೀಟುಹಾಕಿದಾಗ ಅದು ಸೌಲನಿಗೂ ಯೋನಾತಾನನಿಗೂ ಬಂದಿತು. ಜನರೆಲ್ಲಾ ಬಿಡುಗಡೆಗೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಸೌಲನು, “ ಇಸ್ರಾಯೇಲ್ಯರ ದೇವರೇ, ಸತ್ಯವನ್ನು ತಿಳಿಸು” ಎಂದು ಯೆಹೋವನನ್ನು ಪ್ರಾರ್ಥಿಸಿ ಚೀಟು ಹಾಕಿದಾಗ ಅದು ಅವನಿಗೂ ಯೋನಾತಾನನಿಗೂ ಬಂದಿತು, ಜನರು ಪಾರಾದರು.
Kannada BSI Bible 2016
ಸೌಲನು ಇಸ್ರಾಯೇಲಿನ ದೇವರಾದ ಕರ್ತನಿಗೆ--ನೀನು ಪೂರ್ಣ ನಿರ್ಣಯವನ್ನು ದಯಪಾಲಿಸು ಎಂದು ಹೇಳಿ ಚೀಟು ಹಾಕಿದೆನು ಅಂದನು. ಸೌಲನಿಗೂ ಯೋನಾತಾನನಿಗೂ ಚೀಟುಬಂತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಸೌಲನು - ಇಸ್ರಾಯೇಲ್ ದೇವರೇ ಸತ್ಯವನ್ನು ತಿಳಿಸು ಎಂದು ಯೆಹೋವನನ್ನು ಪ್ರಾರ್ಥಿಸಿ ಚೀಟು ಹಾಕಿದಲ್ಲಿ ಅದು ಅವನಿಗೂ ಯೋನಾತಾನನಿಗೂ ಬಂದಿತು; ಜನರು ಪಾರಾದರು.
Kannada Bible (KNCL) BSI 2016
ಅನಂತರ ಸೌಲನು, “ಇಸ್ರಯೇಲ್ ದೇವರೇ, ಸತ್ಯವನ್ನು ತಿಳಿಸಿ,” ಎಂದು ಸರ್ವೇಶ್ವರನನ್ನು ಪ್ರಾರ್ಥಿಸಿ ಚೀಟುಹಾಕಿದನು. ಅದು ಅವನಿಗೂ ಯೋನಾತಾನನಿಗೂ ಬಂದಿತು. ಜನರು ಪಾರಾದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೌಲನು ಇಸ್ರಾಯೇಲರ ದೇವರಾದ ಯೆಹೋವ ದೇವರಿಗೆ, “ನೀವು ಪೂರ್ಣ ನಿರ್ಣಯವನ್ನು ದಯಪಾಲಿಸಿರಿ,” ಎಂದು ಹೇಳಿ ಚೀಟು ಹಾಕಿದನು. ಆಗ ಸೌಲನಿಗೂ ಯೋನಾತಾನನಿಗೂ ಚೀಟು ಬಂತು. ಆದರೆ ಜನರು ಪಾರಾದರು.