1 Samuel 14:45 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಸೈನಿಕರು ಸೌಲನಿಗೆ, “ಈ ದಿನ ಇಸ್ರೇಲರನ್ನು ಮುನ್ನಡೆಸಿ ಮಹಾವಿಜಯವನ್ನು ಉಂಟುಮಾಡಿದ ಯೋನಾತಾನನು ಸಾಯಬೇಕೋ? ಇಲ್ಲ! ಜೀವಸ್ವರೂಪನಾದ ಯೆಹೋವನಾಣೆ, ಯೋನಾತಾನನ ತಲೆಯ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳಲು ನಾವು ಬಿಡುವುದಿಲ್ಲ. ಇಂದು ಫಿಲಿಷ್ಟಿಯರ ವಿರುದ್ಧ ಹೋರಾಡಲು ದೇವರು ಯೋನಾತಾನನಿಗೆ ಸಹಾಯಮಾಡಿದ್ದಾನೆ” ಎಂದು ಹೇಳಿದರು. ಹೀಗೆ ಜನರು ಯೋನಾತಾನನನ್ನು ರಕ್ಷಿಸಿದರು. ಅವನನ್ನು ಸಾಯಿಸಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜನರು ಅವನಿಗೆ, “ದೇವರ ಸಹಾಯದಿಂದ ಈ ಹೊತ್ತು ಇಸ್ರಾಯೇಲರಿಗೆ ಮಹಾ ಜಯವನ್ನುಂಟುಮಾಡಿದ ಯೋನಾತಾನನು ಸಾಯಬೇಕೋ? ಕೂಡದು; ಯೆಹೋವನಾಣೆ, ಅವನ ತಲೆಗೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಿಸಬಾರದು” ಎಂದು ಹೇಳಿ, ಪ್ರಾಯಶ್ಚಿತ್ತವನ್ನು ಕೊಟ್ಟು, ಅವನನ್ನು ಬಿಡಿಸಿದರು.
Kannada BSI Bible 2016
ಆದರೆ ಜನರು ಸೌಲನಿಗೆ--ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆ ಯನ್ನುಂಟು ಮಾಡಿದ ಯೋನಾತಾನನು ಸಾಯ ಬಹುದೋ? ಅದು ಎಂದಿಗೂ ಆಗದು; ಅವನು ಇಂದು ಕರ್ತನ ಸಹಾಯದ ಮೂಲಕ ಕಾರ್ಯವನ್ನು ನಡಿಸಿದ್ದರಿಂದ ಕರ್ತನ ಆಣೆ, ಅವನ ತಲೆಯಲ್ಲಿರುವ ಒಂದು ಕೂದಲಾದರೂ ನೆಲದ ಮೇಲೆ ಬೀಳಬಾರದು ಅಂದರು. ಜನರು ಯೋನಾತಾನನನ್ನು ಸಾಯದ ಹಾಗೆ ಬಿಡಿಸಿಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರ ಸಹಾಯದಿಂದ ಈ ಹೊತ್ತು ಇಸ್ರಾಯೇಲ್ಯರಿಗೆ ಮಹಾಜಯವನ್ನುಂಟುಮಾಡಿದ ಯೋನಾತಾನನು ಸಾಯಬೇಕೋ? ಕೂಡದು; ಯೆಹೋವನಾಣೆ, ಅವನ ತಲೆಗೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಿಸಬಾರದು ಎಂದು ಹೇಳಿ ಪ್ರಾಯಶ್ಚಿತ್ತವನ್ನು ಕೊಟ್ಟು ಅವನನ್ನು ಬಿಡಿಸಿದರು.
Kannada Bible (KNCL) BSI 2016
ಜನರು ಅವನಿಗೆ, “ದೇವರ ಸಹಾಯದಿಂದ ಈ ದಿನ ಇಸ್ರಯೇಲರಿಗೆ ಮಹಾಜಯವನ್ನುಂಟುಮಾಡಿದ ಯೋನಾತಾನನು ಸಾಯಬೇಕೇ? ಕೂಡದು; ಸರ್ವೇಶ್ವರನಾಣೆ. ಅವನ ತಲೆಗೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಿಸಬಾರದು,” ಎಂದು ಹೇಳಿ ಪ್ರಾಯಶ್ಚಿತ್ತವನ್ನು ಕೊಟ್ಟು ಅವನನ್ನು ಬಿಡಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಜನರು ಸೌಲನಿಗೆ, “ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆಯನ್ನುಂಟುಮಾಡಿದ ಯೋನಾತಾನನು ಸಾಯಬೇಕೋ? ಎಂದಿಗೂ ಇಲ್ಲ. ಯೆಹೋವ ದೇವರ ಜೀವದಾಣೆ, ಇದನ್ನು ಅವನು ದೇವರ ಸಹಾಯದಿಂದ ಮಾಡಿದ್ದರಿಂದ, ಅವನ ಒಂದು ಕೂದಲು ನೆಲಕ್ಕೆ ಬೀಳಬಾರದು,” ಎಂದು ಹೇಳಿ ಯೋನಾತಾನನು ಸಾಯದ ಹಾಗೆ ಪ್ರಾಯಶ್ಚಿತ್ತವನ್ನು ಮಾಡಿ ಬಿಡಿಸಿಕೊಂಡರು.